ಮೈಸೂರು

ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಲ್ಲಿರುವ ಸದಸ್ಯರ ವಜಾಕ್ಕೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಮೇ.26:- ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಸದಸ್ಯರನ್ನು ವಜಾಗೊಳಿಸುವಂತೆ ಆಗ್ರಹಿಸಿ ಹಾಗೂ ಸರ್ಕಾರದ ಧೊರಣೆಯನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಅಸಮರ್ಥ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮತ್ತು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿರುವ ಸದಸ್ಯರೆಲ್ಲರನ್ನೂ ವಜಾಗೊಳಿಸಿ ಇವರಿಂದಾಗಿರುವ 2.50ಕೋಟಿ ನಷ್ಟವನ್ನು ವಸೂಲಿ ಮಾಡಬೇಕು.   ಪಠ್ಯಪುಸ್ತಕಗಳಲ್ಲಿ ಸಾಮರಸ್ಯ ಸಾರುವ ಎಲ್ಲಾ ಸಮುದಾಯಗಳ ವ್ಯಕ್ತಿಗಳ ಪರಿಚಯವಿರಬೇಕು. ಕೇಶವ ಬಲರಾಮ್ ಹೆಡಗೆವಾರ್ ನಂತಹ ವ್ಯಕ್ತಿಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಿ ಇತಿಹಾಸ ತಿರುಚುವ ಮತ್ತು ಕೋಮು ದ್ವೇಷ ಹರಡುವಂತಹ ವಿಚಾರಗಳನ್ನು ಮಕ್ಕಳಿಗೆ ಬೋಧನೆ ಮಾಡಬಾರದು. ಸರ್ಕಾರವು ತನ್ನ  ಅಸಮರ್ಥತೆಯನ್ನು ಮುಚ್ಚಿಹಾಕಲು ಅನಾವಶ್ಯಕವಾಗಿ ಹೊಸ ಹೊಸ ವಿವಾದಗಳನ್ನು ಹುಟ್ಟುಹಾಕಿ ಜನಸಾಮಾನ್ಯರಲ್ಲಿ ಗೊಂದಲವನ್ನುಂಟು ಮಾಡಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಚೋರನಹಳ್ಳಿ ಶಿವಣ್ಣ, ಹನುಮನಪುರ ಪುಟ್ಟಣ್ಣ, ಡಾ.ಹರೀಶ್ ಕುಮಾರ್, ಸಣ್ಣಮಾದು, ಬಿಳಿಕೆರೆ ದೇವರಾಜು,ಶಂಕರ್, ಆಟೋ ಸೋಮಣ್ಣ, ಭಾಗ್ಯಮ್ಮ, ಪ್ರಭುಸ್ವಾಮಿ, ಪ್ರೇಮ,ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: