ಮೈಸೂರು

ನೋಡುಗರ ಕಣ್ಮನ ಸೆಳೆದ ಚಿಣ್ಣರ ಚಿತ್ರಕಲಾ ಪ್ರದರ್ಶನ

ಮೈಸೂರು, ಮೇ 14: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀ ರವಿವರ್ಮ ಚಿತ್ರಕಲಾ ಶಾಲೆ ವತಿಯಿಂದ ಆಯೋಜಿಸಿದ್ದ ಚಿಣ್ಣರ ಗಾಯನ ಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನವನ್ನು ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಭಾನುವಾರ ಉದ್ಘಾಟಿಸಿದರು.

ಪ್ರತಿಯೊಂದು ಮಗುವಿನಲ್ಲೂ ತನ್ನದೇ ಆದ ಸುಪ್ತ ಪ್ರತಿಭೆ ಇರುತ್ತದೆ. ಅದನ್ನು ಹೊರತೆಗೆದು, ವಸ್ತು ಸೌಂದರ್ಯವನ್ನು ತನ್ನದೇ ಆದ ರೀತಿಯಲ್ಲಿ ಚಿತ್ರಸಲು ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿತ್ತು. ತನಗಿಷ್ಟವಾದ ಪ್ರಕೃತಿ, ಮನೆ, ಪ್ರಾಣಿಗಳು, ನೇಗಿಲು ಹಿಡಿದು ಉಳುಮೆ ಮಾಡುತ್ತಿರುವ ರೈತ, ಗ್ರಾಮೀಣ ಮಹಿಳೆ, ಪರಿಸರ, ಬಯಲು ಶೌಚ ಸೇರಿದಂತೆ ಎಲ್ಲಾ ಚಿತ್ರಗಳು ನೋಡುಗರ ಕಣ್ಮನ ಸೆಳೆದವು. ತಮ್ಮ ಕಲ್ಪನೆಗೆ ನಿಲುಕಿದ ಚಿತ್ರಗಳನ್ನು ಬಿಡಿಸಿದ ಚಿಣ್ಣರು ಆಡಿ ನಲಿದರು.

ಕಾರ್ಯಕ್ರಮದಲ್ಲಿ ಪ್ರಾಚ್ಯವಸ್ತು ಪರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಗವಿಸಿದ್ದಯ್ಯ, ರವಿವರ್ಮ ಚಿತ್ರಕಲಾ ಶಾಲೆಯ ಪ್ರಾಚಾರ್ಯ ಶಿವಕುಮಾರ ಕೆಸರಮಡು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: