ಮೈಸೂರು

ಅವಧೂತ ದತ್ತಪೀಠದಲ್ಲಿ ಗೀತಾ ಸ್ವರಪ್ರಸ್ಥಾರ ಗ್ರಂಥ ಲೋಕಾರ್ಪಣೆ

ಮೈಸೂರು,ಮೇ.26-  ಇಂದು ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಆಶ್ರಮದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಜನಿಸಿದ ದಿನವಾಗಿದ್ದು, ಈ ಪ್ರಯುಕ್ತ ಬೆಳಿಗ್ಗೆ  ಶ್ರೀಚಕ್ರಪೂಜೆ, ಆಯುಷ್ಯ ಹೋಮ ನೆರವೇರಿಸಲಾಯಿತು.

ನಂತರ   ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಪ್ರತ್ಯಕ್ಷ ಪಾದಪೂಜೆಯನ್ನು ಪೂಜ್ಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ನೆರವೇರಿಸಿದರು.

ಚಿನ್ನ,ವಜ್ರ,ವೈಡೂರ್ಯ, ಮುತ್ತು, ರತ್ನ,ಚಿನ್ನದ ಹೂಗಳು ಅಲ್ಲದೆ ವಿವಿಧ ಬಗೆಯ ಪುಷ್ಪಗಳಿಂದ ಕಿರಿಯ ಶ್ರೀಗಳು ಅತ್ಯಂತ ವೈಭವದಿಂದ ಪಾದ‌ಪೂಜೆ ನೆರವೇರಿಸಿದರು.  ಇದನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.ಅಲ್ಲದೆ ಸ್ವಾಮೀಜಿಯವರಿಗೆ ವಾದ್ಯ ವಾದನದೊಂದಿಗೆ ಜನ್ಮದಿನದ‌ ಶುಭಾಶಯಗಳನ್ನು ಸಲ್ಲಿಸಲಾಯಿತು.
ಈ ವೇಳೆ ಶ್ರೀ ಚಾಮುಂಡೇಶ್ವರಿ ದೇವಿ, ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ,ದುರ್ಗಾದೇವಿ ಸೇರಿದಂತೆ ವಿವಿಧ ದೇವಾಲಯಗಳಿಂದ ತಂದ ತೀರ್ಥವನ್ನು ಶ್ರೀ ‌ಸ್ವಾಮೀಜಿಯವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀಗಳಿಗೆ ಕೊಡುಗೆಗಳನ್ನು ಭಕ್ತರು ನೀಡಿದರು.
ಇದೇ ವೇಳೆ ಮೈಸೂರು ವಿವಿ  ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮತ್ತಿತರರ ಗಣ್ಯರು ಹಾಜರಿದ್ದರು.
ಇದೇ ವೇಳೆ  ಭಗವದ್ಗೀತೆಗೆ ಶ್ರೀ ಸ್ವಾಮೀಜಿಯವರು ಸವಿಸ್ತಾರ ವ್ಯಾಖ್ಯಾನ ಮಾಡಿರುವ ಗೀತಾ ಸ್ವರಪ್ರಸ್ಥಾರ ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು. ಈ ಗ್ರಂಥವು ಎರಡು ಸಾವಿರ ಪುಟಗಳು ಹಾಗೂ ಮೂರು ಸಂಪುಟಗಳನ್ನು ಹೊಂದಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: