ಮೈಸೂರು

ನಿವೃತ್ತಿ ಅಂಚಿನಲ್ಲಿರುವ ಬಿಸಿಯೂಟ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯ

ಮೈಸೂರು,ಮೇ.26:- ನಿವೃತ್ತಿ ಅಂಚಿನಲ್ಲಿರುವ ಬಿಸಿಯೂಟ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರಿನಲ್ಲಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ವಿಶ್ರಾಂತ ಜೀವನವನ್ನು ಇಂದಿನ ಬೆಲೆ ಏರಿಕೆಯ ದಿನದಲ್ಲಿ ಕನಿಷ್ಠ ಮಟ್ಟದಲ್ಲಾದರೂ ಎದುರಿಸಲು ಸರ್ಕಾರ ಜೀವನ ಯೋಗ್ಯ ನಿವೃತ್ತಿ ವೇತನವನ್ನು ನೀಡಬೇಕು. ಈ ನಿರ್ಧಾರವಾಗುವವರೆಗೂ ನಿವೃತ್ತಿಯಾಗುವ ಬಿಸಿಯೂಟ ಕಾರ್ಯಕರ್ತೆಯರಿಗೆ ಐದು ಲಕ್ಷರೂ.ಇಡಿಗಂಟನ್ನು ನೀಡಬೇಕು. ಇವರು ಕಾರ್ಯಕರ್ತೆಯರಾಗಿರುವುದರಿಂದ ಇವರನ್ನು 60ವರ್ಷದ ನಂತರವೂ ಕೆಲಸದಲ್ಲಿ ಮುಂದುವರಿಯಲು ಬಯಸಿದರೆ ಅವರನ್ನು ಮುಂದುವರಿಸಬೇಕು. ಅಂಗನವಾಡಿಯವರ ಬಗ್ಗೆ ಇತ್ತೀಚೆಗೆ ಸರ್ಕಾರ ನಿರ್ಧಾರ ಮಾಡಿದಂತೆ ನಿವೃತ್ತಿಯಾಗುವ ಬಿಸಿಯೂಟ ಕಾರ್ಯಕರ್ತೆಯರ ಕುಟುಂಬಕ್ಕೆ ಆಸರೆಯಾಗಲು ಇವರ ಹುದ್ದೆಯಲ್ಲಿ ಕುಟುಂಬದ ಸದಸ್ಯರನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಯಾವುದೇ ಪರಿಹಾರ ನೀಡದೇ 12ಸಾವಿರ ಅಕ್ಷರ ದಾಸೋಹ ಕಾರ್ಮಿಕರನ್ನು ನಿವೃತ್ತಿಗೊಳಿಸಿ ಹೊರಡಿಸಿರುವ ಸರ್ಕಾರದ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಅಧ್ಯಕ್ಷ ಕೆ.ವಿ.ಭಟ್, ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಸೇರಿದಂತೆ ಹಲವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: