
ಮೈಸೂರು, ಮೇ.26:- ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಆಯೋಜಿಸಿದ್ದ ಅಂತರ ಕಾಲೇಜು ಕುಸ್ತಿ ಪಂದ್ಯಾವಳಿಯಲ್ಲಿ ಎಸ್.ಬಿ.ಆರ್.ಆರ್.ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಪ್ರಶಸ್ತಿ ವಿಜೇತರಾಗಿದ್ದಾರೆ.
ಕ್ರೀಡಾ ವಿಭಾಗದ ಸದಸ್ಯರು ಡಾ. ಸೋಮಶೇಖರ್ ಕೆ.ಕೆ., ದೈಹಿಕ ಶಿಕ್ಷಣ ನಿರ್ದೇಶಕರಾದ ಪಿ.ಎಸ್. ಮಧುಸೂಧನ, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಶೈಕ್ಷಣಿಕ ಸಲಹೆಗಾರರಾದ ಡಾ. ಎಸ್.ಆರ್. ರಮೇಶ್, ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಭಾಸ್ಕರ್ ಹೆಚ್.ಎನ್.ಅವರುಗಳು ಕುಸ್ತಿಯ ತಂಡದ ನಾಯಕ ಮನೋಜ್ ಎಂ. ಸೋಮಶೇಖರ್, ಸಚ್ಚಿನ್, ಮಂಚಣ್ಣ, ಶಶಿಕುಮಾರ್, ಸಾಗರ್ ಎಂ.ಕೆ., ಯೋಗೇಶ್ ನಾಯಕ ಮತ್ತು ಮೋಹನ್ ಕುಮಾರ್ ಡಿ ಅವರನ್ನು ಅಭಿನಂದಿಸಿದ್ದಾರೆ. (ಜಿ.ಕೆ,ಎಸ್.ಎಚ್)