ಮೈಸೂರು

 20 ವರ್ಷಗಳ ನಂತರ ಎಸ್ ಎಸ್ ಎಲ್ ಪರೀಕ್ಷೆ ಬರೆದು ಉತ್ತೀರ್ಣರಾದ ಸಫಾಯಿ ಕರ್ಮಚಾರಿ : ಸನ್ಮಾನ

ಮೈಸೂರು,ಮೇ.27:-  20 ವರ್ಷಗಳ ನಂತರ ಎಸ್ ಎಸ್ ಎಲ್ ಪರೀಕ್ಷೆ ಬರೆದು ಉತ್ತೀರ್ಣರಾಗಿರುವ  ಸಫಾಯಿ ಕರ್ಮಚಾರಿ ಸಂದೇಶ್ ಎಸ್  ಅವರನ್ನು ಕೆ.ಆರ್.ಕ್ಷೇತ್ರದ  ಶಾಸಕ ಎಸ್.ಎ.ರಾಮದಾಸ್  ಸನ್ಮಾನಿಸಿದರು.

2007 ರಿಂದ ಕೆ.ಆರ್.ಕ್ಷೇತ್ರದ ವಾರ್ಡ್ ನಂ.53 ರಲ್ಲಿ ಸಫಾಯಿ ಕರ್ಮಚಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಂದೇಶ್ ಎನ್ನುವವರು 2002 ರಲ್ಲಿ SSLC ಪರೀಕ್ಷೆ ಬರೆಯಬೇಕಿತ್ತು ಆದರೆ ಆಗ ಪರೀಕ್ಷೆ ಬರೆಯಲಾಗದೆ 2022 ರಲ್ಲಿ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ.

ವಾರ್ಡ್. ನಂ. 53 ರ ನಗರಪಾಲಿಕಾ ಸದಸ್ಯರಾದ   ಡಾ.ಜಿ.ರೂಪಾ ಯೋಗೇಶ್ ಅವರು ಪರೀಕ್ಷೆ ಬರೆಯಲು ಪ್ರೋತ್ಸಾಹ ನೀಡಿ ಬೇಕಾದ ಪರೀಕ್ಷಾ ಸಿದ್ಧತೆಗೆ ಸಹಾಯ ಮಾಡಿದ್ದು ಶ್ಲಾಘನೀಯ ಸಂಗತಿಯಾಗಿದೆ.

ಸುಮಾರು 20 ವರ್ಷಗಳ ನಂತರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಸಾಧನೆ ಮಾಡಿರುವುದು ಎಷ್ಟೋ ಜನರಿಗೆ  ಒಂದು ಸ್ಫೂರ್ತಿ ನೀಡಿದಂತಾಗಿದೆ ಎಂದು ಶಾಸಕರು ಇದೇ ವೇಳೆ ತಿಳಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: