
ಕರ್ನಾಟಕಪ್ರಮುಖ ಸುದ್ದಿ
ನದಿಗೆ ಸ್ನಾನ ಮಾಡಲು ಹೋಗಿ ನೀರುಪಾಲಾದ ಯುವಕ ಕುಟುಂಬಕ್ಕೆ ರೇಣುಕಾಚಾರ್ಯ 1 ಲಕ್ಷ ಪರಿಹಾರ
ರಾಜ್ಯ(ದಾವಣಗೆರೆ),ಮೇ.27 : ಹೊನ್ನಾಳಿಯ ಬಳಿ ಇರುವ ತುಂಗಭದ್ರ ನದಿಯಲ್ಲಿ ಸ್ನಾನ ಮಾಡಲು ಹೋಗಿ ನೀರುಪಾಲಾದ ಯುವಕನ ಕುಟುಂಬಕ್ಕೆ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು 1 ಲಕ್ಷ ಪರಿಹಾರವನ್ನು ನೀಡಿದ್ದಾರೆ.
ಹೊನ್ನಾಳಿಯ ಬಳಿ ಇರುವ ತುಂಗಭದ್ರಾ ನದಿಯಲ್ಲಿ ಮಾದನಬಾವಿ ಗ್ರಾಮದ ಯುವಕ ಗಜೇಂದ್ರ (28) ಸ್ನಾನ ಮಾಡಲು ತೆರಳಿದ್ದನು. ಈ ವೇಳೆ ನೀರಿನ ರಭಸಕ್ಕೆ ಸಿಕ್ಕಿ ಈಜಲು ಬಾರದೆ ನೀರುಪಾಲಾಗಿದ್ದನು. ಈಜು ತಜ್ಞರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಜೊತೆ ರೇಣುಕಾಚಾರ್ಯ ಭೇಟಿ ನೀಡಿದರು. ಇದೇ ವೇಳೆ ಯುವಕನ ಕುಟುಂಬಕ್ಕೆ ಶಾಸಕ ಎಂ.ಪಿ.ರೇಣುಕಾಚಾರ್ಯ ಒಂದು ಲಕ್ಷ ವೈಯಕ್ತಿಕ ಪರಿಹಾರ ನೀಡಿ, ಯುವಕನ ತಾಯಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನು ಸಹ ನೀಡಿದ್ದಾರೆ.(ಎಸ್.ಎಂ)