ಪ್ರಮುಖ ಸುದ್ದಿಮನರಂಜನೆವಿದೇಶ

ಮಲಗಿದ್ದಾಗಲೇ ಕೊನೆಯುಸಿರೆಳೆದ ಹಾಲಿವುಡ್ ನಟ ಗಾಢ್ ಫೆಲ್ಲಾಸ್

ವಿದೇಶ(ಅಮೆರಿಕ),ಮೇ.27 : ಗಾಢ್ ಫೆಲ್ಲಾಸ್ ಸೇರಿದಂತೆ ಸಾಕಷ್ಟು ಜನಪ್ರಿಯ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ರೇ ಲಿಯೊಟ್ಟಾ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕಾದ ಈ ನಟ ಮತ್ತು ನಿರ್ಮಾಪಕರಾಗಿಯೂ ಫೇಮಸ್ ಆಗಿದ್ದ 67ರ ವಯಸ್ಸಿನ ಈ ನಟನಿಗೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳು ಇದ್ದಾರೆ. ವರದಿಗಳ ಪ್ರಕಾರ ರೇ ಲಿಯೊಟ್ಟಾ ಮಲಗಿದ್ದಾಗಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗುತ್ತಿದೆ.

ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ, ಅಮೆರಿಕಾದ ಟಿವಿ ವಾಹಿನಿಗಳ ಸೀರಿಸ್ ಗಳಲ್ಲೂ ಅವರು ನಟಿಸಿದ್ದಾರೆ. ಅಲ್ಲದೇ, ಆಪಲ್ ಟಿವಿ, ಸಿರೀಸ್ ಬ್ಲಾಕ್ ಬರ್ಡನ್ ಟರೋನ್ ಎಗೆರ್ಟನ್ ನಲ್ಲೂ ಇವರು ನಟಿಸಿದ್ದರು. ಈ ವಯಸ್ಸಿನಲ್ಲೂ ಮತ್ತೊಂದು ಮದುವೆ ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದ್ದರು ಎಂದು ವರದಿಯಾಗಿದೆ.(ಎಸ್.ಎಂ)

Leave a Reply

comments

Related Articles

error: