ಕರ್ನಾಟಕಪ್ರಮುಖ ಸುದ್ದಿ

ಕಾವೇರಿ ನದಿಯಲ್ಲಿ ತೇಲಿ ಬಂದ ಬಿಎಂಡಬ್ಲ್ಯೂ

ರಾಜ್ಯ(ಮಂಡ್ಯ),ಮೇ.27 : ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರು ಪತ್ತೆಯಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ ವೇಳೆ ಅಚ್ಚರಿಯ ಮಾಹಿತಿ ದೊರೆತಿದೆ.

ಮಂಡ್ಯದ ಶ್ರೀರಂಗಪಟ್ಟಣದ ಸಮೀಪದ ನಿಮಿಷಾಂಭ ದೇಗುಲದ ಬಳಿ ಇಂದು ಬಿಎಂಡಬ್ಲ್ಯೂ ಕಾರು ಪತ್ತೆಯಾಗಿದೆ. ಕಾರು ನದಿಯಲ್ಲಿ ತೇಲುತ್ತಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ. ಪೊಲೀಸರು ಕಾರನ್ನು ಹೊರಗೆ ತೆಗೆಸಿ ವಿಚಾರಣೆ ನಡೆಸಿದಾಗ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬೆಂಗಳೂರಿನ ವ್ಯಕ್ತಿ ಕಾರನ್ನು ನೀರಿನಲ್ಲಿ ಮುಳುಗಿಸಿರುವುದು ಪತ್ತೆಯಾಗಿದೆ.

ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ನಿವಾಸಿ ರೂಪೇಶ್ ತನ್ನ ತಾಯಿ ನಿಧನದ ಬಳಿಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಇವರು ಇಂದು ಕಾರನ್ನು ನೀರಿನಲ್ಲಿ ಮುಳುಗಿಸಿದ್ದರು. ಪೊಲೀಸರು ಕಾರು ಮಾಲೀಕನನ್ನು ಪತ್ತೆ ಹಚ್ಚಿ ಶ್ರೀರಂಗಪಟ್ಟಣದ ಠಾಣೆಗೆ ಕರೆತಂದಿದ್ದರು. ಈ ವೇಳೆ  ಈ ವ್ಯಕ್ತಿ ಅಸಂಬದ್ದ ಹೇಳಿಕೆ ನೀಡುತ್ತಿದ್ದರಿಂದ ಪೊಲೀಸರು ಕಂಗಾಲಾಗಿದ್ದಾರೆ.

ಬಳಿಕ ರೂಪೇಶ್ ನ ಸಂಬಂಧಿಕರು ಠಾಣೆಗೆ ಬಂದು ಆತ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ನೀಡಿದ್ಧಾರೆ. ಸಂಬಂಧಿಕರ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ಖುಲಾಸೆ ಮಾಡಿದ್ದಾರೆ.(ಎಸ್.ಎಂ)

Leave a Reply

comments

Related Articles

error: