ಕರ್ನಾಟಕಪ್ರಮುಖ ಸುದ್ದಿ

ಪ.ಪಂ.ದ ಸಹಕಾರ ಸಂಘಗಳಿಗೆ ಷೇರು ಬಂಡವಾಳ ಹೆಚ್ಚಳ

ರಾಜ್ಯ(ಶಿವಮೊಗ್ಗ) ಮೇ 28 :- ಶಿವಮೊಗ್ಗ ಜಿಲ್ಲೆಯ ಪರಿಶಿಷ್ಟ ಪಂಗಡದ ಜನರು ನಿರ್ವಹಿಸುವ ಸಹಕಾರ ಸಂಘಗಳಿಗೆ ಆರ್ಥಿಕ ಚಟುವಟಿಕೆಗಳಿಗಾಗಿ ಈಗ ನೀಡಲಾಗುತ್ತಿರುವ ಷೇರು ಬಂಡವಾಳವನ್ನು ರೂ. 10.00 ಲಕ್ಷಗಳಿಂದ ರೂ. 20.00 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ.
ಪರಿಶಿಷ್ಟ ಪಂಗಡದ ಜನರ ಸಹಕಾರ ಸಂಘಗಳು ಒಟ್ಟು ಸದಸ್ಯರಿಂದ ಪಾವತಿಯಾದ ಷೇರು ಬಂಡವಾಳದ ಶೆ. 50% ರಷ್ಟು ಅಥವಾ ಗರಿಷ್ಠ ರೂ. 20.00 ಲಕ್ಷಗಳನ್ನು ಷೇರು ಬಂಡವಾಳದ ರೂಪದಲ್ಲಿ ಸರ್ಕಾರದಿಂದ ನೀಡಲಾಗುವುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಅಜ್ಜಪ್ಪ ಹೆಚ್.ಇ.ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-279222 ನ್ನು ಸಂಪರ್ಕಿಸುವುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: