ಕರ್ನಾಟಕಪ್ರಮುಖ ಸುದ್ದಿ

ಪಡಿತರ ಅಕ್ಕಿ ಬಹಿರಂಗ ಹರಾಜು

ರಾಜ್ಯ(ಶಿವಮೊಗ್ಗ )ಮೇ 28; – ಶಿವಮೊಗ್ಗ ನಗರದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1995 ರ ನಿಯಮಗಳ ಉಲ್ಲಂಘನೆಗಾಗಿ ಆಹಾರ ಇಲಾಖೆಯು ವಶಕ್ಕೆ ಪಡೆದ ಪಡಿತರ ಅಕ್ಕಿ ದಾಸ್ತಾನನ್ನು ನಗರದ ಕೆಎಫ್‍ಸಿಎಸ್‍ಸಿ ಸಗಟು ಮಳಿಗೆ, ಎಪಿಎಂಸಿ ಆವರಣ ಇಲ್ಲಿ ಬಹಿರಂಗ ಹರಾಜು ಮಾಡಲಾಗುವುದು.
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾದ 38.90 ಕ್ವಿಂಟಾಲ್ ಅಕ್ಕಿಯನ್ನು ಮೇ 30 ರಂದು ಬೆಳಿಗ್ಗೆ 11.30 ಕ್ಕೆ ಕೆಎಫ್‍ಸಿಎಸ್‍ಸಿ ಗ್ರಾಮಾಂತರ ಸಗಟು ಮಳಿಗೆ, ಎಪಿಎಂಸಿ ಆವರಣ ಇಲ್ಲಿ ತಹಶೀಲ್ದಾರ್‍ರವರ ಸಮಕ್ಷಮದಲ್ಲಿ ಬಹಿರಂಗ ಹರಾಜು ಮಾಡಲಾಗುವುದು.
ಹರಾಜಿನಲ್ಲಿ ಭಾಗವಹಿಸಲು ಆಸಕ್ತರಿರುವ ಬಿಡ್ಡುದಾರರು ಷರತ್ತುಗಳಿಗೆ ಒಳಪಟ್ಟು ಭದ್ರತಾ ಠೇವಣಿ ಪಾವತಿಸಿ ಗೊತ್ತುಪಡಿಸಿದ ದಿನಾಂಕದಂದು ಒಂದು ಗಂಟೆ ಮುಂಚಿತವಾಗಿ ಹಾಜರಿರಬೇಕು ಎಂದು ಶಿವಮೊಗ್ಗ ತಾಲೂಕು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: