ಪ್ರಮುಖ ಸುದ್ದಿಮೈಸೂರು

ಜಿ.ಟಿ. ದೇವೇಗೌಡ ಮೊಮ್ಮಗಳು ವಿಧಿವಶ ಹಿನ್ನೆಲೆ : ಪತ್ರದ ಮೂಲಕ ಪ್ರಧಾನಿ ಮೋದಿ ಸಾಂತ್ವನ; ಕೃತಜ್ಞತೆ ಅರ್ಪಿಸಿದ ಹರೀಶ್ ಗೌಡ

ಮೈಸೂರು,ಮೇ.27:- ಶಾಸಕ ಜಿ ಟಿ ದೇವೇಗೌಡ  ಅವರ ಮೊಮ್ಮಗಳು ವಿಧಿವಶ ಹಿನ್ನೆಲೆಯಲ್ಲಿ ಶಾಸಕ ಜಿ ಟಿ ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನ ಹೇಳಿದ್ದಾರೆ.
ಶಾಸಕ ಜಿ ಟಿ ದೇವೇಗೌಡಗೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ ಅವರು ನಿಮ್ಮ ಮೊಮ್ಮಗಳು ಗೌರಿ ಅವರ ನಿಧನದ ಬಗ್ಗೆ ತಿಳಿದು ನನಗೆ ಆಘಾತವಾಗಿದೆ ಮತ್ತು ತೀವ್ರ ನೋವಾಗಿದೆ. ಇಷ್ಟು ಚಿಕ್ಕವಯಸ್ಸಿನಲ್ಲಿ ಆಕೆ ಇಹಲೋಕ ತ್ಯಜಿಸಿದ್ದಾಳೆ ಎಂದರೆ ನಂಬುವುದು ಅಸಾಧ್ಯ.
ತೀವ್ರ ದುಃಖದ ಈ ಸಮಯದಲ್ಲಿ ನನ್ನ ಹೃತ್ಪೂರ್ವಕ ಸಂತಾಪಗಳು. ಅಂತಹ ಚಿಕ್ಕ ವಯಸ್ಸಿನಲ್ಲಿ ಮಗುವನ್ನು ಕಳೆದುಕೊಂಡಿರುವುದು ಪೋಷಕರಿಗೆ ಮತ್ತು ತಾತನಾಗಿರುವ ನಿಮಗೆ ಅತ್ಯಂತ ಕಷ್ಟಕರ ಸಮಯವಾಗಿದೆ.
ಕುಟುಂಬಕ್ಕೆ ಆದ ನಷ್ಟ ಪದಗಳಿಗೆ ಮೀರಿದೆ.
ಗೌರಿ ಬಿಟ್ಟು ಹೋಗಿರುವ ನೆನಪುಗಳು ಕುಟುಂಬಕ್ಕೆ ಸಾಂತ್ವನ ನೀಡಲಿ. ಈ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿಯನ್ನು ಕುಟುಂಬದ ಸದಸ್ಯರಿಗೆ ಮತ್ತು ಹಿತೈಷಿಗಳಿಗೆ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ಕೃತಜ್ಞತೆ ಅರ್ಪಿಸಿದ ಜಿ.ಡಿ.ಹರೀಶ್ ಗೌಡ ಅವರು ಭಾರವಾದ ಹೃದಯದೊಂದಿಗೆ ನಾವು ನಿಮ್ಮಿಂದ ಸಂತಾಪವನ್ನು ಅಂಗೀಕರಿಸುತ್ತೇವೆ. ಈ ನೋವಿನ ಸಮಯದಲ್ಲಿ ನಿಮ್ಮ ಸಾಂತ್ವನ ಸಮಾಧಾನ ನೀಡಿದೆ . ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಮ್ಮ ಸಂಪೂರ್ಣ ಕುಟುಂಬದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು .
ತಮ್ಮ ಪ್ರಾರ್ಥನೆಗೆ ನಮ್ಮ ಕುಟುಂಬ ಆಭಾರಿಯಾಗಿದೆ. ತಮಗೆ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ.

Leave a Reply

comments

Related Articles

error: