ದೇಶಪ್ರಮುಖ ಸುದ್ದಿ

ಕಾಶ್ಮೀರ ಎನ್‌ಕೌಂಟರ್: ಭಯೋತ್ಪಾದಕರ ವಿರುದ್ಧ ತೀವ್ರಗೊಂಡ ಕಾರ್ಯಾಚರಣೆ

ದೇಶ(ಕಾಶ್ಮೀರ),ಮೇ.28:- ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಭಯೋತ್ಪಾದಕರ ಯೋಜನೆಗಳನ್ನು ವಿಫಲಗೊಳಿಸುವಲ್ಲಿ ಸೇನೆ ಮತ್ತು ಪೊಲೀಸ್ ಸಿಬ್ಬಂದಿ ನಿರತರಾಗಿದ್ದಾರೆ. ಕಳೆದ 3 ದಿನಗಳಲ್ಲಿ ಭದ್ರತಾ ಪಡೆಗಳು 10 ಉಗ್ರರನ್ನು ಹತ್ಯೆಗೈದಿವೆ.
ಅದೇ ವೇಳೆ ಈ ವರ್ಷ ಇದುವರೆಗೆ ಈ ಕಾರ್ಯಾಚರಣೆಯ ಅಡಿಯಲ್ಲಿ ಸುಮಾರು 80 ಭಯೋತ್ಪಾದಕರನ್ನು ಕೊಲ್ಲಲಾಗಿದೆ. ವಾಸ್ತವವಾಗಿ ಜಮ್ಮು ಮತ್ತು ಕಾಶ್ಮೀರದ ವಾತಾವರಣವನ್ನು ಹಾಳು ಮಾಡಲು ಭಯೋತ್ಪಾದಕರು ಹತ್ಯೆಯನ್ನೇ ಆಶ್ರಯಿಸುತ್ತಿದ್ದಾರೆ. ಈ ವರ್ಷದ ಆರಂಭದಿಂದಲೂ ಭಯೋತ್ಪಾದಕರು 16 ನಾಗರಿಕರನ್ನು ಕೊಂದಿದ್ದಾರೆ.

ಗುರುವಾರ ಜಮ್ಮು ಮತ್ತು ಕಾಶ್ಮೀರದ ಕಿರುತೆರೆ ಕಲಾವಿದ ಅಮ್ರಿನ್ ಭಟ್ ಅವರ ಹಂತಕರಾದ ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಈ ಇಬ್ಬರೂ ಭಯೋತ್ಪಾದಕರನ್ನು ಕಾಶ್ಮೀರದ ಅವಂತಿಪೋರಾದಲ್ಲಿ ಹತ್ಯೆ ಮಾಡಲಾಗಿದೆ. ನಟಿಯ ಹತ್ಯೆಯಾದ ನಂತರ ಭದ್ರತಾ ಪಡೆಗಳು ನಿರಂತರವಾಗಿ ಉಗ್ರರಿಗಾಗಿ ಹುಡುಕಾಟ ನಡೆಸುತ್ತಿದ್ದು, ಇದಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹತ್ಯೆಯಾದ 24 ಗಂಟೆಗಳ ನಂತರ, ಇಬ್ಬರೂ ಲಷ್ಕರ್ ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಇದಲ್ಲದೇ ಮತ್ತೊಂದು ಎನ್‌ ಕೌಂಟರ್‌ ನಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: