ಮೈಸೂರು

ಪೊಲೀಸ್ ಕಾನ್ಸಟೇಬಲ್ ನೇಣಿಗೆ ಶರಣು

ಮೈಸೂರು,ಮೇ.28:-  ಪೊಲೀಸ್ ಕಾನ್ಸಟೇಬಲ್ ಓರ್ವರು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ನಿನ್ನೆ ಮೈಸೂರಿನ ಜಲಪುರಿ ಕ್ವಾಟ್ರಸ್ ನಲ್ಲಿ ನಡೆದಿದೆ.

ಮೃತರನ್ನು ದೇವರಾಜ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್ಸಟೇಬಲ್  ಪರ್ಸಪ್ಪ ಕೊನ್ನೂರ್(29) ಎಂದು ಹೇಳಲಾಗಿದೆ.   ಇವರು ಡೆತ್ ನೋಟ್ ನಲ್ಲಿ  ನನ್ನ ಸಾವಿಗೆ ನಾನೇ ಕಾರಣ. ಯಾವುದೇ ತನಿಖೆ ಮಾಡಬೇಡಿ. ನನಗೆ ಬರುವ ಆಸ್ತಿಯನ್ನು ನನ್ನ ಅಣ್ಣನ ಮಕ್ಕಳಿಗೆ ನೀಡಿ  ಎಂದು   ಬರೆದಿದ್ದಾರೆ.

ಪತ್ನಿ ಜೊತೆ ಜಲಪುರಿ ಕ್ವಾಟ್ರಸ್ ನಲ್ಲಿ  ವಾಸವಿದ್ದ ಪರ್ಸಪ್ಪ ಕೊನ್ನೂರ್ ಕಳೆದ ಮೂರು ವರ್ಷಗಳಿಂದ ದೇವರಾಜ ಪೊಲೀಸ್ ಠಾಣೆಯಲ್ಲಿ ಕರ್ತವ್ಯ
ನಿರ್ವಹಿಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: