ಕರ್ನಾಟಕಪ್ರಮುಖ ಸುದ್ದಿ

ಮುಸ್ಲಿಂ ಸಮಾಜ ಹಠ ಮಾಡದೇ ಅನುಭವ ಮಂಟಪವನ್ನು ಬಿಟ್ಟು ಕೊಡಬೇಕು : ಪ್ರಮೋದ್ ಮುತಾಲಿಕ್ ಆಗ್ರಹ

ರಾಜ್ಯ(ಧಾರವಾಡ),ಮೇ.28 : ಬಸವ ಕಲ್ಯಾಣ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಅನುಭವ ಮಂಟಪ. ಆದರೆ ಅದನ್ನು ನಿಜಾಮನ ಕಾಲದಲ್ಲಿ ಅತಿಕ್ರಮಣ ಮಾಡಿ, ಪೀರ್ ಪಾಷಾ ದರ್ಗಾ ಮಾಡಲಾಗಿದೆ. ಇದೀಗ ಮುಸ್ಲಿಂ ಸಮಾಜ ಹಠ ಮಾಡದೇ ಅನುಭವ ಮಂಟಪವನ್ನು ಬಿಟ್ಟು ಕೊಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ಈ ಬಗ್ಗೆ  ನಿನ್ನೆ ಧಾರವಾಡದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಇಂದು ಸರ್ಕಾರ ಬಸವಕಲ್ಯಾಣದಲ್ಲಿ ಬೇರೆ ಕಡೆ ಅನುಭವ ಮಂಟಪ ಮಾಡುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಈಗಿರುವ ಮೂಲ ಸ್ಥಾನ ಅದು, ಭಕ್ತಿಯ ಸ್ಥಳ, 12ನೇ ಶತಮಾನದಲ್ಲಿ ಕ್ರಾಂತಿ ಮಾಡಿದ ಸ್ಥಳ. ಆ ಜಾಗವನ್ನು ಬಿಟ್ಟು ಕೊಡಬೇಕು ಎಂದಿದ್ದಾರೆ.

ನಿಜಾಮನ ಕಾಲದಲ್ಲಿ ಅನುಭವ ಮಂಟಪವನ್ನು ಅತಿಕ್ರಮಣ ಮಾಡಲಾಗಿತ್ತು. ಅದಕ್ಕೆ ದಾಖಲೆಗಳಿವೆ. ಹಿಂದೂ ಧರ್ಮದ ನಿರ್ಲಕ್ಷ್ಯದಿಂದ ಅನುಭವ ಮಂಟಪ ಇನ್ನೊಬ್ಬರ ಪಾಲಾಗಿದೆ. ಸರ್ಕಾರ ಅದನ್ನು ವಾಪಸ್ ಪಡೆದುಕೊಳ್ಳಬೇಕು. ಮುಸ್ಲಿಂ ಸಮಾಜ ಅದನ್ನು ಶಾಂತ ರೀತಿಯಿಂದ ಬಿಟ್ಟುಕೊಡಬೇಕು. ಇಲ್ಲ ಎಂದರೆ ಗಲಭೆಗಳು ಪ್ರಾರಂಭವಾಗಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ವೀರಶೈವ ಲಿಂಗಾಯತ ಪ್ರತಿನಿಧಿಗಳು ಇದರ ಬಗ್ಗೆ ಬಾಯಿ ಬಿಡಬೇಕು. ಜೂನ್ 12 ರಂದು ನಮ್ಮ ನಡೆ ಬಸವಕಲ್ಯಾಣದ ಕಡೆ ಎಂಬ ಕರೆ ನೀಡಲಾಗಿದ್ದು, ಬಹಳಷ್ಟು ಜನ ಸಾಧು, ಸಂತರು ಅಲ್ಲಿಗೆ ಬರುತ್ತಾರೆ. ಅದಕ್ಕೆ ನಾವೂ ಬೆಂಬಲ ಕೊಡಲಿದ್ದೇವೆ ಎಂದು ತಿಳಿಸಿದ್ದಾರೆ.(ಎಸ್.ಎಂ)

Leave a Reply

comments

Related Articles

error: