ದೇಶಪ್ರಮುಖ ಸುದ್ದಿ

ಇಂದು ಗುಜರಾತ್ ಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಭೇಟಿ

ದೇಶ(ನವದೆಹಲಿ),ಮೇ.28:- ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಗುಜರಾತ್‌ ಗೆ ಭೇಟಿ ನೀಡಲಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಈ ಕುರಿತು ಗುಜರಾತ್ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಈ ವರ್ಷಾಂತ್ಯದಲ್ಲಿ ಗುಜರಾತ್‌ ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮೇ 28 ರಂದು ಬೆಳಿಗ್ಗೆ ರಾಜ್‌ ಕೋಟ್ ಜಿಲ್ಲೆಯ ಜಸ್ದನ್ ತೆಹಸಿಲ್‌ ನ ಅತ್ಕೋಟ್ ಗ್ರಾಮದಲ್ಲಿ ಪಟೇಲ್ ಸೇವಾ ಸಮಾಜ ನಿರ್ಮಿಸಿದ ಆಸ್ಪತ್ರೆಯನ್ನು ಮೋದಿ ಉದ್ಘಾಟಿಸಲಿದ್ದಾರೆ.

ಇದಲ್ಲದೇ ರಾಜ್‌ಕೋಟ್-ಭಾವನಗರ ಹೆದ್ದಾರಿಯಲ್ಲಿ 200 ಹಾಸಿಗೆಗಳ ಕೆಡಿ ಪರ್ವಾಡಿಯಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು 40 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ ಮೋದಿ ಅವರು ಗಾಂಧಿನಗರದಲ್ಲಿ ‘ಸಹಕಾರ ಸಮ್ಮೇಳನ’ದಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಹಲವಾರು ಸಹಕಾರಿ ಸಂಸ್ಥೆಗಳ ಸುಮಾರು 10,000 ಚುನಾಯಿತ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: