ಕರ್ನಾಟಕಪ್ರಮುಖ ಸುದ್ದಿ

ಸಿದ್ದರಾಮಯ್ಯ ದ್ರಾವಿಡರಾ,ಆರ್ಯರಾ ಎಂದು ಮೊದಲು ಸ್ಪಷ್ಟ ಮಾಡಲಿ ; ಸಿಎಂ ಬೊಮ್ಮಾಯಿ ಸವಾಲು

ರಾಜ್ಯ(ಬೆಂಗಳೂರು),ಮೇ.28 : ಆರ್.ಎಸ್.ಎಸ್ ಮೂಲ ಕೆದಕಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಎಂ ಬೊಮ್ಮಾಯಿ ಮರು ಪ್ರಶ್ನೆ ಹಾಕಿದ್ದು,  ಸಿದ್ದರಾಮಯ್ಯ ಮೂಲ ಯಾವುದು..? ಎಲ್ಲಿಂದ ಬಂದಿದ್ದಾರೆ..? ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಮಾಧ್ಯಮದೊಂದಿಗೆ ಮಾತನಾಡಿ, ಸಿದ್ದರಾಮಯ್ಯ ದ್ರಾವಿಡರಾ..? ಆರ್ಯರಾ..? ಮೊದಲು ಸ್ಪಷ್ಟ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಇನ್ನೂ ಎಂಇಎಸ್​ ಪುಂಡಾಟ ಪ್ರಕರಣಕ್ಕೆ ಸಿಎಂ ಪ್ರತಿಕ್ರಿಯಿಸಿದ್ದು,  ಕಾನೂನು ಕೈಗೆತ್ತಿಕೊಂಡರೆ ಯಾರನ್ನೂ ಬಿಡಲ್ಲ, ಎಂಇಎಸ್​ಗೆ ನಿನ್ನೆ ಸ್ಪಷ್ಟ ಸಂದೇಶವನ್ನು ಕಳಿಸಿದ್ದೇವೆ ಭಾಷೆ, ಗಡಿ ವಿಚಾರದಲ್ಲಿ ಕ್ಯಾತೆ ಮಾಡಿದ್ರೆ ಸಹಿಸಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿ, ನಮ್ಮ ನೆಲದಲ್ಲಿ ಕಾನೂನು ಭಂಗಕ್ಕೆ ಬಿಡೋದಿಲ್ಲ, ಕನ್ನಡಿಗರಿಗೆ ತೊಂದರೆಯಾದ್ರೆ ಕಠಿಣ ಕ್ರಮ ಜರುಗಿಸ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.(ಎಸ್.ಎಂ)

Leave a Reply

comments

Related Articles

error: