ಮೈಸೂರು

ಭಕ್ತರು ನೀಡಿದ ಪಲ್ಲಕ್ಕಿಯಲ್ಲಿ ಸಾಗಿದ ಗಣಪತಿ ಸಚ್ಚಿದಾನಂದ ಶ್ರೀ

ಮೈಸೂರು, ಮೇ.28:-  ಮೈಸೂರು ಅವಧೂತ ದತ್ತಪೀಠದ  ಗಣಪತಿ ಸಚ್ಚಿದಾನಂದ ‌ಸ್ವಾಮೀಜಿಯವರ‌ 80 ನೇ ಜನ್ಮದಿನೋತ್ಸವ ಪ್ರಯುಕ್ತ ಇಂದು ಬೆಳಿಗ್ಗೆ   ಶ್ರೀದತ್ತ ಹ್ಯೂಮನ್ ಸರ್ವಿಸಸ್ ( SDHS ) ಸ್ವಯಂಸೇವಕರಿಂದ ಪಥಸಂಚಲನ ನಡೆಯಿತು.
ಬೆಳಿಗ್ಗೆ 9 ಕ್ಕೆ ಶ್ರೀಚಕ್ರ ಪೂಜೆ , ಸುದರ್ಶನ ಹೋಮ ನೆರವೇರಿಸಲಾಯಿತು.
ನಂತರ ಸ್ವಾಮೀಜಿಯವರನ್ನು ತಮಿಳುನಾಡಿನ ಭಕ್ತರು ಕೊಡುಗೆಯಾಗಿ ನೀಡಿದ ಚಿನ್ನದ ಲೇಪನವುಳ್ಳ‌ ಪಲ್ಲಕ್ಕಿಯಲ್ಲಿ ಶ್ರೀದತ್ತ ‌ದೇವಸ್ಥಾನದಿಂದ ಮೆರವಣಿಗೆ ಮಾಡಿ ನಾದಮಂಟಪಕ್ಕೆ ಕರೆತರಲಾಯಿತು.
ತಮಿಳುನಾಡಿನ ಒಂದು ಕುಟುಂಬದ ಎಲ್ಲಾ ಸದಸ್ಯರು ಕೋವಿಡ್ ನಿಂದ ಬಳಲಿದ್ದರು. ಆ ಸಂದರ್ಭದಲ್ಲಿ ಅವರು ಶೀಘ್ರ ಗುಣವಾದರೆ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಚಿನ್ನದ ಲೇಪನವುಳ್ಳ‌ ಪಲ್ಲಕ್ಕಿಯನ್ನು ಮಾಡಿಸಿಕೊಡುವುದಾಗಿ ಹರಸಿಕೊಂಡಿದ್ದರಂತೆ. ಆ ಕುಟುಂಬದವರು ಗುಣಮುಖರಾದ ನಂತರ  ಚಿನ್ನದ ಪಲ್ಲಕ್ಕಿಯನ್ನು ದತ್ತಪೀಕ್ಕೆ ನೀಡುವ ಮೂಲಕ ಅವರು ಹರಕೆ ತೀರಿಸಿದ್ದಾರೆ.
ಆದರೆ ಸ್ವಾಮೀಜಿಯವರು ಆ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳುವುದಿಲ್ಲವೆಂದು ಹಠ ಹಿಡಿದಿದ್ದರು. ನಂತರ ಭಕ್ತರು ‌ನಿಮ್ಮಲ್ಲೇ‌ ನಾವು ದೇವರನ್ನು ಕಾಣುತ್ತೇವೆ,ನೀವು ಪಲ್ಲಕ್ಕಿಯಲ್ಲಿ ಕುಳಿತು ಸಾಗಲೇಬೇಕು ಇದೂ ಕೂಡಾ ನಮ್ಮ ಸೇವೆ ಎಂದು ಮನವೊಲಿಸಿದ ನಂತರ ಸ್ವಾಮೀಜಿ ಪಲ್ಲಕ್ಕಿಯಲ್ಲಿ ಸಾಗಿದರು.
ಯುವಕ ಯುವತಿಯರು ನೃತ್ಯ ಮಾಡುತ್ತಾ ಹಾಗೂ ಕೋಲಾಟವಾಡುತ್ತಾ ಮೆರವಣಿಗೆಯಲ್ಲಿ ಸಾಗಿದ್ದು ಎಲ್ಲರನ್ನೂ ಆಕರ್ಷಿಸಿತು.
ಇದೇ ವೇಳೆ ದಿವ್ಯಾಂಗರಿಗೆ , ಆರ್ಥಿಕವಾಗಿ ಹಿಂದುಳಿದವರಿಗೆ ವ್ಹೀಲ್‌ ಚೇ‌ರ್ ಗಳು, ಹೊಲಿಗೆ ಯಂತ್ರಗಳು, ಎಂ.ಆರ್.ಕಿಟ್,ಸಿಪಿ.ಚೇರ್,ಸ್ಟ್ಯಾಂಡಿಂಗ್ ಫ್ರೇಮ್ ಗಳು,ವಾಕರ್ ಗಳು,ಗೈಟರ್ಸ್,ಆಕ್ಸಿಲರಿ ಕ್ಲಚ್ಚರ್ಸ್,ವಾಕಿಂಗ್ ಸ್ಟಿಕ್, ಇತ್ಯಾದಿ ಸಹಾಯಕ ಉಪಕರಣಗಳ ವಿತರಣೆ ಮಾಡಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: