ಮೈಸೂರು

ಬಲಿಜ ಸಮುದಾಯ ಸಾಮಾಜಿಕ ಅಸಡ್ಡೆಗೊಳಗಾಗಿದೆ: ರಾಜಶೇಖರ ನಾಯ್ಡು

ಮೈಸೂರು, ಮೇ 14: ಬಲಿಜ ಸಮುದಾಯವನ್ನು ಜಾತಿಗಣತಿಗೆ ಸೇರಿಸದೆ ಇರುವುದರಿಂದ ಸಾಮಾಜಿಕ ಅಸಡ್ಡೆಗೊಳಗಾಗಿದೆ ಎಂದು ಚಿತ್ರ ನಿರ್ಮಾಪಕ ಹಾಗೂ ರಾಜಕೀಯ ಅಂಕಣಕಾರ ಜಿ.ಎನ್.ರಾಜಶೇಖರ ನಾಯ್ಡು ಬೇಸರ ವ್ಯಕ್ತಪಡಿಸಿದರು.

ಭಾನುವಾರ ಮೈಸೂರು ಜಿಲ್ಲಾ ಬಲಿಜ ಸಮಾಜದ ವತಿಯಿಂದ ಪುರಭವನದಲ್ಲಿ ಆಯೋಜಿಸಿದ್ದ ಬಲಿಜ ಜಾತಿಗಣತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಲಿಜ ಸಮಾಜ ಅನಾದಿ ಕಾಲದಿಂದಲೂ ಕಡೆಗಣನೆಗೆ ಒಳಗಾಗಿದೆ. ಬೇರೆ ಸಮುದಾಯಗಳು ತಮ್ಮ ಕುಲಬಾಂಧವರ ಅಂಕಿ ಅಂಶಗಳನ್ನಾದರೂ ಸಂಗ್ರಹಿಸುತ್ತಾರೆ. ಆದರೆ ಬಲಿಜ ಸಮುದಾಯ ಯಾವುದನ್ನೂ  ಮಾಡದೆ ತೀರಾ ಹಿಂದುಳಿದಿದೆ. ರಾಜ್ಯ ಸರ್ಕಾರ ನಡೆಸಿದ ಜಾತಿಗಣತಿಯಲ್ಲಿ ಬಲಿಜ ಸಮಾಜವನ್ನು ಸೇರಿಸಿಯೇ ಇಲ್ಲ ಇದರಿಂದ ಸಮಾಜಕ್ಕೆ ದೊರೆಯಬೇಕಿದ್ದ ಸೌಲಭ್ಯಗಳೆಲ್ಲವೂ ಕೈತಪ್ಪಿ ಹೋಗಿವೆ. ಹಾಗಾಗಿ ಬಲಿಜಿಗರ ಸಂಖ್ಯೆಯನ್ನು ತಿಳಿಯುವ ಸಲುವಾಗಿ ಜಾತಿಗಣತಿ ಮಾಡಲಾಗುತ್ತಿದೆ. ಇದರಿಂದ ಸಮುದಾಯದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು,

ಇದೇ ವೇಳೆ ಬಲಿಜ ಮುಖಂಡ ಟಪಾಲ್ ಗಣೇಶ್ ಜಾತಿಗಣತಿಯ ಅರ್ಜಿ ನಮೂನೆ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಅಂಕಣಕಾರ ಗುಬ್ಬಿಗೂಡು ರಮೇಶ್, ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ನಾಯ್ಡು, ಶ್ರೀ ಯೋಗಿ ನಾರಾಯಣ ಬಣಜಿಗ ಸಂಘದ ಅಧ್ಯಕ್ಷ ಎಂ.ನಾರಾಯಣ, ಕೊಡಗು ಜಿಲ್ಲಾ ಬಲಿಜ ಸಮಾಜದ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: