ಪ್ರಮುಖ ಸುದ್ದಿಮೈಸೂರು

ಕಾನೂನು ಪ್ರಕಾರವೇ ನಾವು ದೇವಸ್ಥಾನಗಳನ್ನು ಪಡೆದುಕೊಳ್ಳುತ್ತೇವೆ : ಪ್ರಮೋದ್ ಮುತಾಲಿಕ್

ಮೈಸೂರು,ಮೇ.28:- ಕಾನೂನು ಪ್ರಕಾರವೇ ನಾವು ದೇವಸ್ಥಾನಗಳನ್ನು ಪಡೆದುಕೊಳ್ಳುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದರು.

ಮೈಸೂರಿನಲ್ಲಿಂದು    ಎಸ್ ಡಿಪಿಐ ಅಧ್ಯಕ್ಷ ಮಳಲಿ‌ ಮಸೀದಿಯ ಒಂದು ಸಣ್ಣ ಮರಳನ್ನೂ ತೆಗೆದುಕೊಂಡು ಹೋಗಲು ಬಿಡುವುದಿಲ್ಲ  ಎಂಬ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಎಸ್.ಡಿ.ಪಿ.ಐ ಅಧ್ಯಕ್ಷನ ಈ‌ ಹೇಳಿಕೆಯನ್ನು ವಿರೋಧಿಸುತ್ತೇನೆ. ತಾಂಬೂಲ ಶಾಸ್ತ್ರದ ಪ್ರಕಾರ ಮಳಲಿ ದೇವಸ್ಥಾನ ವೀರಶೈವ ಲಿಂಗಾಯತ ಸುಮದಾಯಕ್ಕೆ ಸೇರಿದ್ದು. ಮಸೀದಿ ಸ್ಟ್ರಕ್ಚರಲ್ ನೋಡಿದರೆ ಗೊತ್ತಾಗುತ್ತೆ. ಅವರ ಹೇಳಿಕೆಗಳು ಕೆರಳಿಸುತ್ತದೆ. ಮಳಲಿ ದೇವಸ್ಥಾನ ಒಂದೇ ಅಲ್ಲ. ದೇಶದಾದ್ಯಂತ ದೇವಸ್ಥಾನ ಒಡೆದು ಮಸೀದಿಗಳನ್ನು ಕಟ್ಟಿರುವುದನ್ನು ಕಾನೂನು ಪ್ರಕಾರ ತೆಗೆದು ಕೊಳ್ಳುತ್ತೇವೆ. ನಿಮಗೆ ನಾಚಿಕೆ, ಮಾನ, ಮರ್ಯಾದೆ ಇದ್ದರೆ ನೀವು ಸೌಹಾರ್ದತೆಯಿಂದ ಇರಬೇಕಾದರೆ ಬದುಕುವುದನ್ನು ಕಲಿಯಿರಿ. ಕಾನೂನು ಪ್ರಕಾರವೇ ನಾವು ದೇವಸ್ಥಾನಗಳನ್ನು ಪಡೆದುಕೊಳ್ಳುತ್ತೇವೆ ಎಂದರು.

ಇಲ್ಲಿರುವ ಮುಸ್ಲಿಂ ಅಫ್ಘಾನಿಸ್ತಾನ ಅಥವಾ ಇನ್ನೊಂದು ದೇಶದಿಂದ ಬಂದಿದ್ದಲ್ಲ ನೀವು ಹಿಂದುಸ್ತಾನ್ ನಲ್ಲೇ ಇರೋದು. ನೀವು ಭಾರತೀಯರು. 30 ಸಾವಿರ ದೇವಸ್ಥಾನ ಒಡೆದು ಮಸಿದಿ ಕಟ್ಟಿದ್ದೀರಿ, ನಿಮ್ಮ ರೀತಿಯಲ್ಲಿ ದಾಳಿ ಮಾಡಿ ನಾವು ತೆಗದುಕೊಳ್ಳುವುದಿಲ್ಲ. ತಾಂಬೂಲ ಶಾಸ್ತ್ರ, ಅಷ್ಟ ಮಂಗಳ ಇದು‌ ವೈಜ್ಞಾನಿಕವಾಗಿದೆ. ಒದ್ದು ಒಳಗಾಗ್ತೀನಿ ಅಂದವನು ಸರ್ವ ನಾಶ ಆಗ್ತಾನೆ. ತಾಂಬೂಲ ಶಾಸ್ತ್ರ  ಇದನ್ನು ಪ್ರಶ್ನೆ ಮಾಡಿದ ಆ ವ್ಯಕ್ತಿ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಇಂತಹ ಹೇಳಿಕೆ ನೀಡಿದ ನಿಮ್ಮ ನಾಲಿಗೆ ಸೀಳಿ ಹಾಕುತ್ತೇವೆ. ಎಲ್ಲವೂ ಕೈಬಿಟ್ಟು ಹೋಗುತ್ತಿದೆ ಎಂದು ಅವರು ಹತಾಶರಾಗಿದ್ದಾರೆ ಎಂದರು.

ಹಿಜಾಬ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ಹಿಜಾಬ್ ಮುಗಿದಿತ್ತು, ಈವಾಗ ಮತ್ತೆ ಎತ್ತಿರುವುದರ ಹಿಂದೆ ಹಿಡನ್ ಅಜೆಂಡಾ ಇದೆ. ಗಲಭೆ ಸೃಷ್ಟಿಸಲು ಸಂಚು ನಡೆಯುತ್ತಿದೆ. ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. 15 ಜನರಿಗಾಗಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಬಲಿಪಶು ಮಾಡಬೇಡಿ. 15 ಜನ ವಿದ್ಯಾರ್ಥಿಗಳನ್ನು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ಕಿಡಿಕಾರಿದರು.

ಟಿಪ್ಪು ಸುಲ್ತಾನ್ ಮತಾಂತರ, ದೇಶದ್ರೋಹಿ, ಕನ್ನಡ ದ್ರೋಹಿ. ಇವನನ್ನು ಸಾರ್ವಕರ್ ಜೊತೆ ಹೋಲಿಕೆ  ಮಾಡಬೇಡಿ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: