ದೇಶಪ್ರಮುಖ ಸುದ್ದಿಮನರಂಜನೆ

ನಯನತಾರ-ವಿಘ್ನೇಶ್ ಶಿವನ್ ಮದುವೆ ದಿನಾಂಕದಲ್ಲಿ ಬದಲಾವಣೆ : ದೇವಸ್ಥಾನದ ಬದಲು ರೆಸಾರ್ಟ್ ನಲ್ಲಿ ಸಪ್ತಪದಿ

ದೇಶ(ಚೆನ್ನೈ),ಮೇ.28 :- ಖ್ಯಾತ ನಟಿ  ನಯನತಾರ ಮತ್ತು ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಅವರ ಮದುವೆಯ ದಿನಾಂಕ ಮತ್ತು ಸ್ಥಳ ಬದಲಾಗಿದ್ದು, ಚೆನ್ನೈನಲ್ಲೇ ಈ ಜೋಡಿ ಸಪ್ತಪದಿ ತುಳಿಯಲಿದ್ದಾರೆ.

ತಿರುಪತಿಗೆ ನಯನತಾರಾ ಮತ್ತು ವಿಗ್ನೇಶ್ ಹೋಗಿ ಬಂದ ನಂತರ ತಿರುಪತಿಯಲ್ಲೇ ಮದುವೆ ಫಿಕ್ಸ್ ಎಂದು ಕುಟುಂಬಸ್ಥರು ಹೇಳಿದ್ದರು. ಆದರೆ, ಮದುವೆ ದಿನಾಂಕದ ಬಗ್ಗೆ ಗೊಂದಲವಾಗಿತ್ತು. ಇದೀಗ ಎಲ್ಲದಕ್ಕೂ ಉತ್ತರ ಸಿಕ್ಕಿದ್ದು. ಜೂನ್ 5 ರ ಬದಲಾಗಿ ಜೂನ್ 9 ರಂದು ನಯನತಾರಾ ಮತ್ತು ವಿಘ್ನೇಶ್ ಶಿವನ್ ಹಸೆಮಣೆ ಏರಲಿದ್ದಾರೆ.

ತಿರುಪತಿ ಬದಲಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ತಮಿಳು ನಾಡಿನ ಹೆಸರಾಂತ ರೆಸಾರ್ಟ್ ನಲ್ಲಿ ಈ ಜೋಡಿ ಮದುವೆಯಾಗಲಿದ್ದು  ಈ ಜೋಡಿಯ ಹೊಸ ಜೀವನಕ್ಕಾಗಿ ಮಹಾಬ್ಸ್ ರೆಸಾರ್ಟ್ ಶೀಘ್ರದಲ್ಲೇ ಸಿಂಗಾರಗೊಳ್ಳಲಿದೆ. ಈಗಾಗಲೇ ತಮ್ಮ ಮದುವೆಗೆ ಆಹ್ವಾನಿಸಲು ಅತಿಥಿಗಳ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿರುವ ಜೋಡಿ, ಅತ್ಯಾಪ್ತ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಮಾತ್ರ ಪ್ರವೇಶ ಕಲ್ಪಿಸಿದೆ.

ಮದುವೆಯ ನಂತರ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಅಲ್ಲಿ ಸಿನಿಮಾ ರಂಗದ ನಟ, ನಟಿ, ತಂತ್ರಜ್ಞರಿಗೆ ಮತ್ತು ಆಪ್ತರಿಗೆ ಆಹ್ವಾನ ನೀಡಲಾಗುತ್ತದೆಯಂತೆ. ಈ ಆರತಕ್ಷತೆ ಕಾರ್ಯಕ್ರಮವು ಚೆನ್ನೈನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಆರು ವರ್ಷಗಳಿಂದ ಪ್ರೀತಿಸುತ್ತಿರುವ ನಯನತಾರಾ ಮತ್ತು ವಿಘ್ನೇಶ್ ಮದುವೆಯ ಮುನ್ನ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಒಟ್ಟಿಗೆ ಸಿನಿಮಾ ಕೂಡ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಬ್ಬರೂ ಜೊತೆಯಾಗಿ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ಆಶೀರ್ವಾದ ಕೂಡ ಪಡೆದಿದ್ದಾರೆ.(ಎಸ್.ಎಂ)

Leave a Reply

comments

Related Articles

error: