ಮೈಸೂರು

ವಿಪರೀತ ಕುಡಿತದ ಚಟ ಅಂಟಿಸಿಕೊಂಡಿದ್ದ ಮಹಿಳೆ ನೇಣಿಗೆ ಶರಣು

ಮೈಸೂರು,ಮೇ.28:- ವಿಪರೀತ ಕುಡಿತದ ಚಟ ಅಂಟಿಸಿಕೊಂಡಿದ್ದ ಗೃಹಿಣಿಯೋರ್ವಳು  ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಆಲನಹಳ್ಳಿ ಬಡಾವಣೆಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ನಾಗರತ್ನ (29) ಎಂದು ಹೇಳಲಾಗಿದೆ. ಕಳೆದ 10 ವರ್ಷಗಳ ಹಿಂದೆ ಪ್ರಾವಿಷನ್ ಸ್ಟೋರ್ಸ್ ನಡೆಸುತ್ತಿದ್ದ ವೆಂಕಟಾದ್ರಿ ಎಂಬಾತನನ್ನು  ವಿವಾಹವಾಗಿದ್ದ ನಾಗರತ್ನ ಒಂದು ಮಗುವಿನ ತಾಯಿ ಕೂಡ ಆಗಿದ್ದಳು. ಕುಡಿತದ ಚಟಕ್ಕೆ ದಾಸಳಾಗಿದ್ದ ನಾಗರತ್ನ ಮಾನಸಿಕವಾಗಿಯೂ ಅಸ್ವಸ್ಥಳಾಗಿದ್ದಳು.

ಪತಿ ವೆಂಕಟಾದ್ರಿ ಪ್ರಾವಿಷನ್ ಸ್ಟೋರ್ಸ್ ಗೆ ತೆರಳಿದ ಬಳಿಕ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: