
ಕರ್ನಾಟಕಪ್ರಮುಖ ಸುದ್ದಿ
ಸಂಘಪರಿವಾರದ ಮೂಲ ಎಲ್ಲರಿಗೂ ಗೊತ್ತಿದೆ, ಆದರೆ ಕಾಂಗ್ರೆಸ್ ನ ಮೂಲ ಇಟಲಿ ; ಬಿ.ಸಿ.ನಾಗೇಶ್ ಟಾಂಗ್
ರಾಜ್ಯ(ಕೊಪ್ಪಳ),ಮೇ.28 : ಸಂಘಪರಿವಾರದ ಮೂಲ ಎಲ್ಲರಿಗೂ ಗೊತ್ತಿದೆ. ಆದರೆ, ಕಾಂಗ್ರೆಸ್ ನ ಮೂಲ ಇಟಲಿ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಇಂದು ಕೊಪ್ಪಳದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಧ್ಯಮದೊಂದಿಗೆ ಮಾತನಾಡಿ, ಸಿದ್ದರಾಮಯ್ಯ ತಮ್ಮ ಐದು ವರ್ಷದ ಅಧಿಕಾರದಲ್ಲಿ ಏನು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ದೇಶದ ಇತಿಹಾಸವನ್ನು ಮಕ್ಕಳಿಗೆ ತಿಳಿಸೊದರಲ್ಲಿ ಮೊದಲಿನಿಂದಲೂ ತಪ್ಪಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ಎಲ್ಲ ಗ್ರಾಮಗಳಿಂದ ಜನರು ಭಾಗಿಯಾಗಿದ್ದರು. ಇತಿಹಾಸದ ಮೂಲಕ ಅದನ್ನು ತಿಳಿಸುವಲ್ಲಿ ವಿಫಲವಾಗಿದ್ದೇವೆ. ಹೀಗಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅದನ್ನು ತಿಳಿಸುತ್ತಿದ್ದೇವೆ ಎಂದಿದ್ದಾರೆ.
ಪಠ್ಯಪುಸ್ತಕ ರಚನೆ ಸಂಬಂಧ ಅನಗತ್ಯ ವಿವಾದ ಎಬ್ಬಿಸಲಾಗುತ್ತಿದೆ. ರಾ ಯತೆ, ಹಿಂದುತ್ವ ಸಹಿಸಕೊಳ್ಳದವರು ವಿವಾದ ಮಾಡುತ್ತಿದ್ದಾರೆ. ಕಿಸಲು ಏನೂ ಸಿಗದಿದ್ದಾಗ ಜಾತಿ ಬಗ್ಗೆ ಮಾತನಾಡುತ್ತಾರೆ. ಬ್ರಿಟಿಷರ ಕಾಲದಿಂದ ಇದು ನಡೆದುಕೊಂಡು ಬಂದಿದೆ. ದೇಶದ ಜನರಿಗೆ ಯಾವುದು ನಿಜ, ಯಾವುದು ಸುಳ್ಳು ಅನ್ನೋದು ಗೊತ್ತಿದೆ. ಮೊದಲು ಟಿಪ್ಪು, ಭಗತ್ ಸಿಂಗ್, ನಾರಾಯಣ ಗುರು, ಬಸವಣ್ಣವರನ್ನು ಪಠ್ಯಪುಸ್ತಕ ತೆಗೆದು ಹಾಕಿದ್ದಾರೆಂದು ಸುಳ್ಳು ಹೇಳಿದ್ದರು. ಈ ಮೂಲಕ ಹಿಂದುಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬ್ರಿಟಿಷರಿಂದ ಅಧಿಕಾರ ವಹಿಸಿಕೊಂಡ ದಿನದಿಂದ ಕಾಂಗ್ರೆಸ್ ಮಾಡಿದ್ದು ಇದನ್ನೇ. ಹಿಂದಿನ ಸರ್ಕಾರ ಮಕ್ಕಳನ್ನು ಒಡೆಯೋ ಕೆಲಸ ಮಾಡಿದ್ದು ಎಲ್ಲರಿಗೂ ಗೊತ್ತಿದೆ ಎಂದು ಕೈನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.(ಎಸ್.ಎಂ)