ಕರ್ನಾಟಕಪ್ರಮುಖ ಸುದ್ದಿ

‘ಕೆ.ಜಿ.ಎಫ್ ಬಾಬು’ಗೆ ಐಟಿ ಶಾಕ್ : ಬಾಬು ನಿವಾಸ ಸೇರಿ 7 ಕಡೆಗಳಲ್ಲಿ ದಾಳಿ

ರಾಜ್ಯ(ಬೆಂಗಳೂರು),ಮೇ.28 : ಆದಾಯ ತೆರಿಗೆ ವಂಚನೆ ಆರೋಪದಡಿ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಕೆಜಿಎಫ್ ಬಾಬು ನಿವಾಸ ಸೇರಿ 7 ಕಡೆಗಳಲ್ಲಿ ಇಂದು ಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಂದು ಬೆಳಗ್ಗೆ 7:30ರ ಸುಮಾರಿಗೆ 4 ಇನೋವಾ ಕಾರಿನಲ್ಲಿ ಐಟಿ ಅಧಿಕಾರಿಗಳು ವಸಂತನಗರಕ್ಕೆ ಬಂದಿದ್ದಾರೆ. ಅಲ್ಲಿಯ ಕೆಜಿಎಫ್ ಬಾಬು ಒಡೆತನದ ರುಕ್ಸಾನ ಪ್ಯಾಲೇಸ್ ಹಾಗೂ ಕಚೇರಿಯ ಮೇಲೂ ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಚುನಾವಣಾ ನಿಂತು ಸೋತಿದ್ದ ಕೆಜಿಎಫ್ ಬಾಬು, ಬೆಂಗಳೂರು ನಗರ ಸ್ಥಳೀಯ ಸಂಸ್ಥೆಯಿಂದ ಪರಿಷತ್‍ಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಆದಾಯ ತೆರಿಗೆ ವಂಚನೆ ಆರೋಪದಡಿ ಬೆಳಗ್ಗೆಯಿಂದ 7 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಡಿಕೆ ಶಿವಕುಮಾರ್ ಆಪ್ತರಾಗಿ ಟಿಕೆಟ್ ಗಿಟ್ಟಿಸಿಕೊಂಡಿದ್ದ ಕೆಜಿಎಫ್ ಬಾಬು, ಚುನಾವಣೆ ಸಂದರ್ಭದಲ್ಲಿ 1,741 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದರು. ರುಕ್ಸಾನಾ ಪ್ಯಾಲೇಸ್, ಉಮ್ರಾ ಡೆವಲಪರ್ಸ್, ಉಮ್ರಾ ರಿಯಲ್ ಎಸ್ಟೇಟ್ ಕಂಪನಿಗಳು ಸೇರಿದಂತೆ ಅಧಿಕಾರಿಕಾರಿಗಳು ಒಟ್ಟು 7 ಕಡೆ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಕೆಜಿಎಫ್ ಬಾಬು ಸ್ನೇಹಿತರ ಮನೆಯ ಮೇಲೂ ದಾಳಿ ನಡೆಸಿದ್ದಾರೆ. ಕೆಜಿಎಫ್ ಬಾಬುಗೆ ಸೇರಿದ ಮನೆ, ಕಚೇರಿ ಸೇರಿ ಹಲವೆಡೆ ಶೋಧ ಪರಿಶೀಲನಾ ಕಾರ್ಯ ನಡೆಯುತ್ತಿದೆ.

ಕಳೆದ ಏಳು ಘಂಟೆಗಳಿಂದ ಐಟಿ ಅಧಿಕಾರಿಗಳಿಂದ ಶೋಧ ಕಾರ್ಯ ನಡೆಯುತ್ತಿದ್ದು, ಒಟ್ಟು 23 ಬ್ಯಾಂಕ್ ಖಾತೆಗಳನ್ನು ಕೆಜಿಎಫ್ ಬಾಬು ಕುಟುಂಬಸ್ಥರು ಹೊಂದಿದ್ದಾರೆ. ಪತ್ನಿ ಮತ್ತು ಮಕ್ಕಳ ಹೆಸರಲ್ಲಿ 11 ಅಕೌಂಟ್ ಹೊಂದಿರುವ ಕೆಜಿಎಫ್ ಬಾಬು ಅವರು ಯೂಸಫ್ ಫರೀಫ್, ಮೊದಲ ಪತ್ನಿ ರುಕ್ಸಾನ, ಎರಡನೆ ಪತ್ನಿ ಶಾಜಿಯಾ, ಮಗಳು ಉಮ್ರಾ ಫರೀಫ್, ಮಗ ಅಫ್ನಾನ್ ಫರೀಫ್ ಹೆಸರಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಬಾಬು ಕುಟುಂಬಸ್ಥರ ಅಕೌಂಟ್‍ಗಳಲ್ಲಿ 70 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ.

ಕೆಲ ತಿಂಗಳ ಹಿಂದೆ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಮುಂಬರುವ 2023ರ ವಿಧಾನಸಭಾ ಚುನಾಚಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ಉಮ್ರಾ ಡೆವಲಪರ್ಸ್ ಕಂಪನಿಯ ಮಾಲೀಕರಾಗಿದ್ದಾರೆ. ಸ್ಕ್ರಾಪ್ ಉದ್ಯಮದಲ್ಲಿ ಕೋಟ್ಯಂತರ ರೂ. ಹಣ ಗಳಿಸಿದ್ದಾಗಿ ಕೆಲವೆಡೆ ಹೇಳಿಕೊಂಡಿದ್ದರು.

ಐಟಿ ದಾಳಿಗೂ ಕೆಜಿಎಫ್ ಬಾಬುಗೂ ಅವಿನಾಭಾವ ಸಂಬಂಧವಿದೆ. ಕೆಜಿಎಫ್ ಬಾಬು ಕಳೆದ 15 ವರ್ಷದಲ್ಲಿ 7ನೇ ಬಾರಿಗೆ ಐಟಿ ದಾಳಿ ಎದುರಿಸುತ್ತಿದ್ದಾರೆ. ಕರ್ನಾಟಕ ಅಷ್ಟೆ ಅಲ್ಲದೆ ತಮಿಳುನಾಡು, ಆಂಧ್ರ ಹಾಗೂ ಮಹಾರಾಷ್ಟ್ರದಲ್ಲೂ ರಿಯಲ್ ಎಸ್ಟೆಟ್ ಉದ್ಯಮ ನಡೆಸುತ್ತಿರುವ ಕೆಜಿಎಫ್ ಬಾಬು ಎಲ್ಲಾ ಕಡೆಗಳಲ್ಲಿ ಆಕ್ಷನ್ ಸೈಟ್‍ಗೆಳ ಬಿಡ್ಡಿಂಗ್‍ನಲ್ಲಿ ಭಾಗವಹಿಸಿ ಜಾಗ ಖರೀದಿ ಮಾಡಿ ಫೇಮಸ್ ಆಗಿದ್ದಾರೆ. ಇವರು ಕೆಜಿಎಫ್ ಬಾಬು ಎನ್ನುವುದಕ್ಕಿಂತಲೂ ಆಕ್ಷನ್ ಬಾಬು ಎಂದೇ ಪ್ರಸಿದ್ಧಿ ಪಡೆದಿದ್ದಾರೆ.(ಎಸ್.ಎಂ)

Leave a Reply

comments

Related Articles

error: