ಕರ್ನಾಟಕಪ್ರಮುಖ ಸುದ್ದಿ

ಸ್ವಾತಂತ್ರ್ಯದ ಪರಿಕಲ್ಪನೆ ಹುಟ್ಟುಹಾಕಿದ್ದೇ ವೀರಸಾವರ್ಕರ್ ; ಸಂಸದ ಪ್ರತಾಪ್ ಸಿಂಹ

ರಾಜ್ಯ(ಉಡುಪಿ),ಮೇ.28 : ಸ್ವಾತಂತ್ರ್ಯದ ಪರಿಕಲ್ಪನೆ ಹುಟ್ಟುಹಾಕಿದ್ದೇ ವೀರಸಾವರ್ಕರ್. ಅಹಿಂಸೆ ಉಪವಾಸದಿಂದ ದೇಶ ಸ್ವತಂತ್ರವಾಗಲು ಸಾಧ್ಯವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಉಡುಪಿ ಅಜ್ಜರಕಾಡು ಮೈದಾನದಲ್ಲಿ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ದರು.

ಈ ವೇಳೆ  ಪ್ರತಾಪ್ ಸಿಂಹ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯದ ಪರಿಕಲ್ಪನೆ ಹುಟ್ಟುಹಾಕಿದ್ದೇ ವೀರಸಾವರ್ಕರ್. ಅಹಿಂಸೆ ಉಪವಾಸದಿಂದ ದೇಶ ಸ್ವತಂತ್ರವಾಗಲು ಸಾಧ್ಯವಿಲ್ಲ. ವಿಶ್ವದ 63 ದೇಶಗಳು ಸ್ವತಂತ್ರವಾದದ್ದು ಕ್ರಾಂತಿಯಿಂದ. ಪಾಠದಲ್ಲಿ ನಮ್ಮ ಮೇಲಿನ ಆಕ್ರಮಣದ ಬಗ್ಗೆ ಮಾತ್ರ ಓದುತ್ತೇವೆ. ನಮ್ಮ ಪಾಠಗಳಲ್ಲಿ ಡೆಲ್ಲಿ ಸುಲ್ತಾನರು ಮೊಘಲರು ಮಾತ್ರ ಇದ್ದಾರೆ. ಮೊಘಲರು ಬರುವ ಮೊದಲು ಭಾರತಕ್ಕೆ ಇತಿಹಾಸವೇ ಇಲ್ಲವೇ ಎಂದಿದ್ದಾರೆ. ಚೋಳರು, ಚೇರರು, ಗುಪ್ತರು ರಾಷ್ಟ್ರಕೂಟರು, ಕದಂಬರು , ಹೊಯ್ಸಳರು ಪೇಶ್ವೆಯನ್ನು ನಾವು ಮರೆತು ಬಿಟ್ಟೆದ್ದೇವೆ ಎಂದಿದ್ದಾರೆ.

ತ್ರಿವರ್ಣ ಧ್ವಜದಲ್ಲಿ ಇಂದು ಗಾಂಧೀಜಿ ಚರಕ ಇರುತ್ತಿತ್ತು. ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರ ಹಾಕಿಸಿದ್ದು ವೀರ ಸಾವರ್ಕರ್. ಅಶೋಕ ಚಕ್ರ ಮುಂದೊಂದು ದಿನ ಸುದರ್ಶನ ಚಕ್ರ ಆಗುತ್ತದೆ. ಅಂಡಮಾನ್ ಬರ್ಮಾ ಜೈಲಿನಲ್ಲಿ ಇದ್ದವರು ನಿಜವಾದ ಸ್ವಾತಂತ್ರ ಹೋರಾಟಗಾರರು. ಕಾಲಾಪಾನಿ ಶಿಕ್ಷೆ ಅನುಭವಿಸಿದವರು ಸ್ವಾತಂತ್ರ ಹೋರಾಟಗಾರರು. ಪುಣೆಯ ಪ್ಯಾಲೇಸ್ ನಲ್ಲಿ ಇದ್ದವರು ಸ್ವತಂತ್ರ ಹೋರಾಟಗಾರರ ಆಗಲು ಸಾಧ್ಯವಿಲ್ಲ. ಕ್ಷಾತ್ರ ಗುಣ ಇಲ್ಲದಿದ್ದರೆ ಪ್ರಪಂಚದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.(ಎಸ್.ಎಂ)

Leave a Reply

comments

Related Articles

error: