
ಕರ್ನಾಟಕಪ್ರಮುಖ ಸುದ್ದಿ
ಹಾಲು ನೀಡುತ್ತಿರುವ ಗಂಡು ಮೇಕೆ : ಗ್ರಾಮದ ಜನರಿಗೆಲ್ಲ ಆಶ್ಚರ್ಯ
ರಾಜ್ಯ(ಹಾವೇರಿ),ಮೇ.28 : ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ಗಂಡು ಮೇಕೆಯೊಂದು ಹಾಲು ನೀಡುತ್ತಿದ್ದು, ಗ್ರಾಮದ ಜನರೆಲ್ಲರೂ ಆಶ್ಚರ್ಯ ಚಕಿತರಾಗುತ್ತಿದ್ದಾರೆ.
ಇಷ್ಟು ದಿನ ಹೆಣ್ಣು ಮೇಕೆ ಹಾಲು ಕೊಡೋದು ನೋಡಿದ್ರಿ. ಗಂಡು ಮೇಕೆ ಹಾಲು ಕೊಡೋದು ಎಲ್ಲಾದ್ರೂ ನೋಡಿದೀರಾ? ಈ ಅಪರೂಪದ ಸನ್ನಿವೇಶ ಹಾವೇರಿಯಲ್ಲಿ ಕಂಡುಬಂದಿದೆ. ಇದು ಆಶ್ಚರ್ಯ ಆದರೂ ಸತ್ಯ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ಒಂದು ಗಂಡು ಮೇಕೆ ಹಾಲು ನೀಡುತ್ತಿದೆ. ನರೇಗಲ್ ಗ್ರಾಮದ ಚಮನ್ ಶಾವಲಿ ಗಲ್ಲಿಯಲ್ಲಿರುವ ಸಾದಿಕ್ ಮಕಾನದಾರ್ ಎಂಬುವವರ ಮನೆಯಲ್ಲಿರುವ ಗಂಡುಮೇಕೆ ಹಾಲು ನೀಡುತ್ತಿದೆ.
ಸುಮಾರು ಒಂದೂವರೆ ವರ್ಷದ ಗಂಡು ಮೇಕೆ ಕಳೆದ ಕೆಲ ತಿಂಗಳಿಂದ ಹಾಲು ನೀಡುತ್ತಿದೆ. ಸಾದಿಕ್ ಈ ಹಿಂದೆ ಒಂದು ಮೇಕೆ ಸಾಕಿದ್ದರು. ಆ ಮೇಕೆ ಗಂಡು ಮರಿ ಹಾಕಿ ಸಾವನ್ನಪ್ಪಿದೆ. ಅದರ ಮರಿಯಾಗಿರುವ ಈ ಗಂಡು ಮೇಕೆಯನ್ನ ಸಾದಿಕ್ ಮನೆಯವರು ದೇವರಿಗೆ ಅಂತಾ ಬಿಟ್ಟಿದ್ದಾರೆ.
ಈ ರೀತಿ ದೇವರಿಗೆ ಬಿಟ್ಟಿರುವ ಗಂಡುಮೇಕೆ ಈಗ ಹಾಲು ನೀಡುತ್ತಿದೆ. ಆರಂಭದಲ್ಲಿ ಈ ಗಂಡು ಮೇಕೆ ಹಾಲು ನೀಡುವುದನ್ನ ಸುತ್ತಮುತ್ತಲಿನ ಜನ ನಂಬುತ್ತಿರಲಿಲ್ಲ. ಆದರೆ ಅವರ ಕಣ್ಣಮುಂದೆ ಹಾಲು ಕರೆಯುವುದನ್ನ ನೋಡಿದ ಜನ ಆಶ್ಚರ್ಯ ಚಕಿತರಾಗಿದ್ದಾರೆ.(ಎಸ್.ಎಂ)