ಮೈಸೂರು

ಕರ್ನಾಟಕದ ಕಸ್ತೂರಬಾ  ಯಶೋಧರ ದಾಸಪ್ಪನವರ 116ನೇ ಜನ್ಮದಿನ ಆಚರಣೆ

ಮೈಸೂರು, ಮೇ.28:- ಮೈಸೂರು ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ನಮ್ಮೂರು ನಮ್ಮೂರು ಸಮಾಜಸೇವಾ ಟ್ರಸ್ಟ್ ವತಿ ಯಿಂದ ಇಂದು ಕರ್ನಾಟಕದ ಕಸ್ತೂರಬಾ  ಯಶೋಧರ ದಾಸಪ್ಪನವರ 116ನೇ ಜನ್ಮದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಮೈಸೂರು ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ನಮ್ಮೂರು ನಮ್ಮೂರು ಸಮಾಜಸೇವಾ ಟ್ರಸ್ಟ್ ವತಿ ಯಿಂದ ಇಂದು ಕರ್ನಾಟಕದ ಕಸ್ತೂರಬಾ  ಯಶೋಧರ ದಾಸಪ್ಪನವರ 116ನೇ ಜನ್ಮದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಈ ವೇಳೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಡಾ. ಸಿ ಪಿ ಕೃಷ್ಣಕುಮಾರ್ ಅವರು
ಹುಲಿಯ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುವುದು ಎಂಬ ನಾಣ್ಣುಡಿಯಂತೆ ಸಾಧಕರ ವಂಶದಲ್ಲಿ ಮಹಾನ್ ಸಾಧಕಿಯ ಜನನವಾಗುತ್ತದೆ ಅವರು ದೊಡ್ಡ ಬಳ್ಳಾಪುರ ತಾಲ್ಲೂಕಿನ ಕಲ್ಲುದೇವರಹಳ್ಳಿಯಲ್ಲಿ ಚಿಕ್ಕಣ್ಣೇಗೌಡರ ವಂಶದ ಮೇರು ಕಿರೀಟ ಎಂಬ ಖ್ಯಾತಿ ಪಡೆದ  ಕೆ ಹೆಚ್ ರಾಮಯ್ಯ ಹಾಗೂ ರೇವಮ್ಮ ದಂಪತಿಗೆ 1905 ರ ಮೇ 28 ರಂದು ಮೊದಲ ಮಗುವಾಗಿ ಒಂದು ಹೆಣ್ಣು ಮಗು ಜನನವಾಗುತ್ತದೆ ಆ ಮಗುವಿಗೆ ಸಾರ್ವಕಾಲಿಕ ಆದರ್ಶ ಮಹಿಳೆ ಭಗವಾನ್ ಬುದ್ದರ ಆದರ್ಶ ಪತ್ನಿ ಯಶೋಧರೆಯ ನೆನಪಿಗೆ ಯಶೋಧರಾ ಎಂದು ನಾಮಕರಣ ಮಾಡುತ್ತಾರೆ ಅವರೇ ಕರ್ನಾಟಕದ ಪ್ರಥಮ ಮಹಿಳಾ ಸಚಿವರು ಸ್ವಾತಂತ್ರ ಹೋರಾಟಗಾರರು ಆದ   ಯಶೋಧರ ದಾಸಪ್ಪನವರು ಎಂದು ಸ್ಮರಿಸಿದರು.

ಟ್ರಸ್ಟಿನ ಅಧ್ಯಕ್ಷ ಬೀಡನಹಳ್ಳಿ ಸತೀಶ್ ಗೌಡ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ  ಯಶೋದರ ದಾಸಪ್ಪನವರು 1950 ರಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಹುಕಾರ್ ಚನ್ನಯ್ಯನವರನ್ನು ಪರಾಭವಗೊಳಿಸಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಸಕ್ರಿಯ ರಾಜಕಾರಣಿಯಾದರು 1962 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗಂಡಸಿ ವಿಧಾನಸಭಾ ಕ್ಷೇತ್ರದಿಂದ ಮೈಸೂರು ರಾಜ್ಯದ ವಿಧಾನಸಭೆಗೆ ಸರಿ ಸುಮಾರು 11498 ಮತಗಳ ಅಂತರದಿಂದ ಆಯ್ಕೆಗೊಂಡು ಪ್ರಥಮವಾಗಿ ಪಾದಾರ್ಪಣೆ ಮಾಡುತ್ತಾರೆ.

ಪಕ್ಷದ ನಾಯಕರಾಗಿದ್ದ ನಿಜಲಿಂಗಪ್ಪನವರು ಆಯ್ಕೆಯಾಗದ ಕಾರಣ ಎಸ್ ಆರ್ ಕಂಠಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಾರೆ ಅವರ ಸಂಪುಟದಲ್ಲಿ ಮಾರ್ಚ್ ಮಾಹೆಯಲ್ಲಿ ಮಂತ್ರಿಯಾಗಿ ಎಂಟು ಜನರಿದ್ದ ಸಂಪುಟಕ್ಕೆ ಪ್ರಥಮ ಮಹಿಳೆಯಾಗಿ  ಯಶೋದರ ದಾಸಪ್ಪನವರು ಸೇರುತ್ತಾರೆ. ನಂತರದ ದಿನಗಳಲ್ಲಿ ನಿಜಲಿಂಗಪ್ಪನವರಿಗಾಗಿ ಸ್ಥಾನ ತ್ಯಾಗ ಮಾಡುವ ಸಲುವಾಗಿ ಬಾಗಲಕೋಟೆ ಕ್ಷೇತ್ರದ ಮುನರಾಳ ಅವರು ರಾಜೀನಾಮೆ ನೀಡುತ್ತಾರೆ ಈ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ನಿಜಲಿಂಗಪ್ಪ ಆಯ್ಕೆಯಾಗುತ್ತಾರೆ ಕಂಠಿ ಮುಖ್ಯಮಂತ್ರಿ ಪಾಲಿಗೆ ರಾಜೀನಾಮೆ ನೀಡುತ್ತಾರೆ 1962 ಜೂನ್ 2 ರಂದು ನಿಜಲಿಂಗಪ್ಪ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕರಿಸುತ್ತಾರೆ. ಅವರ ಸಂಪುಟದಲ್ಲಿ ಸಹ ಸಮಾಜ ಕಲ್ಯಾಣ ಸಚಿವರಾಗಿ ಶ್ರೀಮತಿ ಯಶೋದರ ದಾಸಪ್ಪನವರು ಮುಂದುವರೆಯುತ್ತಾರೆ.

ಹರಿಜನ ಗಿರಿಜನ ಮಕ್ಕಳು ಹಾಗೂ ಮಹಿಳಾ ಕಲ್ಯಾಣ ಸಾಮಾಜಿಕ ಅಸಮಾನತೆ ವಿರುದ್ದ ದಿನ ಎತ್ತಿದ ಗಟ್ಟಿಗಿತ್ತಿ ಇವರು ಹಲವು ಯೋಚನೆ ಹಾಗೂ ಯೋಜನೆಗಳ ಮೂಲಕ ಸಾಮಾಜಿಕ ಅಸಮಾನತೆ ತೊಲಗಿಸಬೇಕು ಎಂದು ಹೋರಾಡಿದ ಸಾರ್ಥಕ ಮಂತ್ರಿ  ಯಶೋದರ ದಾಸಪ್ಪನವರು ಎಂದು ತಿಳಿಸಿದರು. ನೊಂದು ಬೆಂದವರಿಗಾಗಿ ಸಾಮಾಜಿಕ ಸುಧಾರಣೆಗಾಗಿ ಅರಸೀಕೆರೆಯಲ್ಲಿ ಕಸ್ತೂರಬಾ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಿರ್ಮಾಣ ಮಾಡಿ ಉಳಿದ ಜೀವಿತಾವಧಿಯನ್ನು ಸಮಾಜಮುಖಿ ಚಿಂತನೆಗಳ ಅನುಷ್ಠಾನಕ್ಕೆ ವಿನಿಯೋಗ ಮಾಡಿಕೊಂಡರು ಎಂದು ಹೇಳಿದರು.

ಈ ವೇಳೆ ಟ್ರಸ್ಟಿನ ಅಧ್ಯಕ್ಷ ಸತೀಶ್ ಗೌಡ ಬೀಡನಹಳ್ಳಿ ನಗರಪಾಲಿಕೆ ಸದಸದಸ್ಯರುಗಳಾದ ಪ್ರೇಮ ಶಂಕರೇಗೌಡ, ಎಸ್ ಬಿ ಎಂ ಮಂಜು, ಮಾಜಿ ಪಾಲಿಕೆ ಸದಸ್ಯರಾದ ಪ್ರಶಾಂತ್.ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ರಾಜ್ ಕುಮಾರ್ ಗೌಡ, ಟ್ರಸ್ಟಿನ ಉಪಾಧ್ಯಕ್ಷ ಕುಮಾರ್ ಗೌಡ, ಕಾರ್ಯದರ್ಶಿ ರವಿ.ಸಿ ಜೆ ಪಾಲಕ್ಷ. ಎ,ನೇಹಾ. ಕೃಷ್ಣೇಗೌಡ ವಾಸು ಇತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: