ಮೈಸೂರು

157ನೇ ಸ್ವಚ್ಛ ಭಾರತ ಅಭಿಯಾನ

ಮೈಸೂರು, ಮೇ.14:- ಹೆಚ್ ವಿ ರಾಜೀವ್  ಸ್ನೇಹ  ಬಳಗ ಮತ್ತು ಮೈಸೂರು ಮಹಾನಗರ ಪಾಲಿಕೆ ಸಹಕಾರದೊಂದಿಗೆ 157 ನೇ ಸ್ವಚ್ಛ ಮೈಸೂರು ಅಭಿಯಾನವನ್ನು  ಶ್ರೀರಾಂಪುರ 2 ನೇ ಹಂತ ಬೆಮೆಲ್ ಲೇಔಟ್ ಧನ್ವಂತರಿ ಆಸ್ಪತ್ರೆ  ಎದುರು ಇರುವ ಬೆಮೆಲ್ ಉದ್ಯಾನವನದಲ್ಲಿಹಮ್ಮಿಕೊಳ್ಳಲಾಗಿತ್ತು.

ಅಭಿಯಾನದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಸದಸ್ಯರು, ಶ್ರೀ ಕಲ್ಕಿ  ಭಗವಾನ್ ಮಾನವ ಸೇವಾಲಯ ಸದಸ್ಯರು,ಶ್ರೀ ಗುರು ರಾಘವೇಂದ್ರ ಸ್ನೇಹ ಬಳಗದ ಸದಸ್ಯರು, ಆದಿ ಕರ್ನಾಟಕ ಹಿತರಕ್ಷಣಾ ಹೋರಾಟ ಸಮತಿ ಸದಸ್ಯರು,ನವೋದಯ ಫೌಂಡೇಷನ್ ಸದಸ್ಯರು,  ಸ್ಪಂದನ ಟ್ರಸ್ಟ್ ಸದಸ್ಯರು, ನಮ್ಮ ಖುಷಿ ಟ್ರಸ್ಟ್ ಸದಸ್ಯರು , ಸಮರ್ಪಣ ತಂಡದ ಸದಸ್ಯರು, ಲಯನ್ಸ್ ನಿಸರ್ಗ ಅಸೋಸಿಯೇಷನ್ ಸದಸ್ಯರು,  ಪೌರ ಕಾಮಿ೯ಕ  ಮುಖ೦ಡರು ಪಾಲ್ಗೊಂಡಿದ್ದರು. – (ವರದಿ: ಕೆ.ಎಸ್,ಎಸ್.ಎಚ್)

Leave a Reply

comments

Related Articles

error: