ಮೈಸೂರು

ಜಾತಿವಾರು ಪರೀಕ್ಷೆಗಳನ್ನು ನಾವು ನಡೆಸಿಲ್ಲ: ಸಚಿವ ತನ್ವೀರ್ ಸೇಠ್ ಸ್ಪಷ್ಟನೆ

ಮೈಸೂರು, ಮೇ.14:- ಮಾಜಿ ಸಂಸದ ಎಚ್. ವಿಶ್ವನಾಥ್ ಹೇಳಿಕೆಗೆ  ಶಿಕ್ಷಣ ಸಚಿವ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ. ಜಾತಿವಾರು ಪರೀಕ್ಷೆಗಳನ್ನು ನಾವು ನಡೆಸಿಲ್ಲ. ಪಠ್ಯ ಪುಸ್ತಕಗಳ ವಿಷಯಾಧಾರಿತ ಪರೀಕ್ಷೆ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನ್ನ ಅಧಿಕಾರಾವಧಿಯಲ್ಲಿ‌ ಎಲ್ಲರೂ ಪಾಸಾಗಬೇಕು ಎಂಬ ಆಸೆ ಇಲ್ಲ.  ಕಷ್ಟಪಟ್ಟು ಓದಿದವರು ಪಾಸಾಗಿದ್ದಾರೆ. ಇದೊಂದು ಪಾರದರ್ಶಕ ಪರೀಕ್ಷೆಯಾಗಿದ್ದು, ವಿದ್ಯಾರ್ಥಿಗಳು, ಪೋಷಕರು ಖುಷಿಯಾಗಿದ್ದಾರೆ. ವಿಶ್ವನಾಥ್ ಕೂಡಾ ಹಿಂದೆ ಶಿಕ್ಷಣ ಸಚಿವರಾಗಿದ್ದವರು. ಈ ಬಗ್ಗೆ ಅವರಿಗೂ ತಿಳಿವಳಿಕೆ ಇರುತ್ತೆ.ಕಳೆದ ನಾಲ್ಕು ವರ್ಷಗಳಲ್ಲಿ ಪಕ್ಷ ಹಾಗೂ ಸರ್ಕಾರ ಜತೆ ಜತೆಯಾಗಿ ಹೋಗಿಲ್ಲ ಎಂಬ ನೋವಿದೆ. ಸಕಾಲಕ್ಕೆ‌ ನಿಗಮ‌ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿಲ್ಲ. ನೇಮಕ ಮಾಡಿದ ನಂತರ ಅವಧಿ ಕಡಿಮೆಯಾಗಿದೆ. ಇದಕ್ಕೆ ನಾವೆಲ್ಲರೂ ಹೊಣೆಯಾಗಿದ್ದೇವೆ. ಮುಂದೆ ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿಯಿದೆ. ವಕ್ಫ್ ಆಸ್ತಿಗಳು ಒತ್ತುವರಿ ಮಾಡಿದವರ ವಿರುದ್ದ‌ ಕ್ರಮ ತೆಗೆದುಕೊಳ್ಳುತ್ತೇವೆ. ಸ್ಮಶಾನ, ವಕ್ಫ್ ಆಸ್ತಿಗಳು ಸರಿಯಾಗಿ ಖಾತೆ ಆಗಿಲ್ಲ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಸಭೆ ನಡೆಸಿ ಮಾಹಿತಿ ಕೊಡುತ್ತಿದ್ದೇವೆ. – (ವರದಿ:ಕೆ.ಎಸ್,ಎಸ್,ಎಚ್)

Leave a Reply

comments

Related Articles

error: