ಮೈಸೂರು

ಯಕ್ಷಗಾನಕ್ಕೆ ಜೋಶಿ ಅವರ ಸೇವೆ ಅನನ್ಯ: ಸಾಮಗ

ಮೈಸೂರು, ಮೇ ೧೪: ಡಾ.ಎಂ.ಪ್ರಭಾಕರ ಜೋಶಿ ಅವರು ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅನನ್ಯ. ಅವರ ವಿಮರ್ಶೆಯಲ್ಲಿ ಯಕ್ಷಗಾನದ ಪರಂಪರೆ, ಗುಣಲಕ್ಷಣ, ಹುಟ್ಟು ಬೆಳವಣಿಗೆ ಎಲ್ಲವೂ ಹಡಗಿದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಅಭಿಪ್ರಾಯಪಟ್ಟರು.
ಭಾನುವಾರ ಜಗನ್ಮೋಹನ ಅರಮನೆಯಲ್ಲಿ ಪ್ರಭಾಕರ ಜೋಶಿ ಅಭಿನಂದನಾ ಸಮಿತಿ ವತಿಯಿಂದ ಆಯೋಜಿಸಿದ್ದ ಹಿರಿಯ ಸಂಸ್ಕೃತಿ ಚಿಂತಕ, ಯಕ್ಷಗಾನ ಅರ್ಥಧಾರಿ ಡಾ.ಎಂ ಪ್ರಭಾಕರ ಜೋಶಿ ಅವರ ವಾಗರ್ಥ ಗೌರವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಜೋಶಿ ಅವರು ಯಕ್ಷಗಾನದಲ್ಲಿ ಕೈಯ್ಯಾಡಿಸದ ಕ್ಷೇತ್ರವೇ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಭಾಗವಹಿಸಿ ತಮ್ಮದೇ ಆದ ಕೊಡುಗೆ ನೀಡಿರುವ ಜೋಶಿ ಅವರು, ಯಕ್ಷಗಾನದಲ್ಲಿ ತಮ್ಮದೇ ಆದ ಪರಂಪರೆ ಹುಟ್ಟು ಹಾಕಿದ್ದಾರೆ. ವಿಶಿಷ್ಟ ವಿಮರ್ಶೆಯ ಮೂಲಕ ವಿಶೇಷ ಹೆಸರು ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೆಂಕಟರಮಣ ಭಟ್ಟ, ಡಾ.ಎಂ.ಪ್ರಭಾಕರ ಜೋಶಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: