ಕರ್ನಾಟಕದೇಶಪ್ರಮುಖ ಸುದ್ದಿ

ದೂರವಾಣಿ ಮೂಲಕ ಸಿದ್ದಗಂಗಾಶ್ರೀಗಳ ಆರೋಗ್ಯ ವಿಚಾರಿಸಿದ ಮೋದಿ

ಪ್ರಮುಖಸುದ್ದಿ, ರಾಜ್ಯ(ತುಮಕೂರು) ಮೇ.14: ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾಮಠದ ಶಿವಕುಮಾರ ಸ್ವಾಮೀಜಿಯವರ ಆರೋಗ್ಯದ ಕುರಿತು  ಪ್ರಧಾನಿ ನರೇಂದ್ರ ಮೋದಿ ವಿಚಾರಿಸಿದ್ದಾರೆ.

ಸಿದ್ದಗಂಗಾ ಮಠದ ಕಿರಿಯ ಯತಿ ಸಿದ್ದಲಿಂಗಸ್ವಾಮೀಜಿಯವರಿಗೆ ಭಾನುವಾರ ಸಾಯಂಕಾಲ  5.10ರ ಸಮಯದಲ್ಲಿ  ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಸುಮಾರು 2 ನಿಮಿಷಗಳ ಕಾಲ ಮಾತನಾಡಿದರು. ಕರೆ ಮಾಡಿದ ಶ್ರೀಗಳ ಆರೋಗ್ಯದ ಬಗ್ಗೆ ವಿಚಾರ ಮಾಡಿದ  ನರೆಂದ್ರ ಮೋದಿಯವರು  ಶೀಘ್ರದಲ್ಲೇ ಮಠಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ ಎಂದು ತುಮಕೂರಿನಲ್ಲಿ ಸಿದ್ದಗಂಗಾ ಮಠದ ಕಿರಿಯ ಯತಿ ಸಿದ್ದಲಿಂಗಸ್ವಾಮೀಜಿಯವರು ಹೇಳಿದ್ದಾರೆ. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: