ಕರ್ನಾಟಕ

ಕರುವಿನ ಮೇಲೆರಗಿದ ಬೀದಿ ನಾಯಿ

ರಾಜ್ಯ,(ಚಾಮರಾಜನಗರ)ಮೇ.15:-  ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಜನತೆ ಕಂಗೆಡುವಂತಾಗಿದೆ. ಚಾಮರಾಜನಗರದ  ಮಧ್ಯ ಭಾಗದಲ್ಲಿ   ಬೀದಿನಾಯಿಗಳ ಹಾವಳಿಯಿಂದ ಬೆಳಗಿನ ಜಾವ ಪುಟ್ಟ ಕರು ಗಾಯಗೊಂಡಿರುವ ಘಟನೆ ನಡೆದಿದೆ.  ಬೀದಿ ನಾಯಿಗಳು ಮಕ್ಕಳ ಮೇಲೂ ಎರಗುವ ಸಾಧ್ಯತೆಗಳಿರುವುದರಿಂದ ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಿದರೆ ಒಳ್ಳೆಯದು ಎಂದು ಸಾರ್ವಜನಿಕರು ತಿಳಿಸಿದ್ದಾರೆ. – (ವರದಿ: ಕೆ.ಎಸ್,ಎಸ್.ಎಚ್)

Leave a Reply

comments

Related Articles

error: