ಕರ್ನಾಟಕಪ್ರಮುಖ ಸುದ್ದಿ

2017/18 ರಲ್ಲಿ ಕನಿಷ್ಠ ಒಂದು ಲಕ್ಷ ಯುವಜನತೆಗೆ ಉದ್ಯೋಗ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ: ಸಿಎಂ ಸಿದ್ದರಾಮಯ್ಯ

ಪ್ರಮುಖಸುದ್ದಿ, ರಾಜ್ಯ(ಬೆಂಗಳೂರು) ಮೇ.15:- 2017/18 ರಲ್ಲಿ ಕನಿಷ್ಠ ಒಂದು ಲಕ್ಷ ಯುವಜನತೆಗೆ ಉದ್ಯೋಗ ಒದಗಿಸುವುದು ಸರ್ಕಾರದ ಉದ್ದೇಶ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೇಟ್ ಹಾಲ್ ನಲ್ಲಿ  ಕೌಶಲ್ಯ ಅಭಿವೃದ್ಧಿ ವೆಬ್ ಪೋರ್ಟಲ್ ಗೆ ಸಿದ್ದರಾಮಯ್ಯ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ರಾಜ್ಯಾದ್ಯಂತ ಕೌಶಲ್ಯ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಈಗಾಗಲೇ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಹಂತ ಹಂತವಾಗಿ ಒಂದು ಕೋಟಿ 80 ಲಕ್ಷ ಯುವಜನತೆಗೆ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲಿ ಮೊದಲ ರಾಜ್ಯ ಕರ್ನಾಟಕವಿದೆ.ಎಫ್ ಡಿ ಎ ಹೂಡಿಕೆಯಲ್ಲಿ ರಾಜ್ಯ ಮೂರನೇ ಸ್ಥಾನ ಪಡೆದಿದೆ. ವೆಬ್ ಸೈಟ್ ಮತ್ತು ವೆಬ್ ಪೋರ್ಟಲ್ ಮೂಲಕ ಯುವಜನತೆ ನೋಂದಣಿ ಮಾಡಿಕೊಂಡು ಕೌಶಲ್ಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು. ನೋಂದಣಿ ಮಾಡಿಕೊಂಡವರಿಗೆ ಮೂರು ತಿಂಗಳು ಸರ್ಕಾರದಿಂದ ಉಚಿತ ತರಬೇತಿ ನೀಡಲಾಗುತ್ತದೆ. ಯುವಕರಿಗೆ ಉದ್ಯೋಗ ದೊರೆತರೆ ನಾಡಿಗೆ ಮತ್ತು ದೇಶದ ಅಭಿವೃದ್ಧಿ ಸಾಧ್ಯ ಎಂದರಲ್ಲದೇ ಕೌಶಲ್ಯ ಅಭಿವೃದ್ಧಿಯ ರಾಯಭಾರಿಯಾಗಿದ್ದಕ್ಕೆ ನಟ ಪುನೀತರಾಜಕುಮಾರಗೆ ಅಭಿನಂದನೆ ಸಲ್ಲಿಸಿದರು.

ವಿಧಾನಸಭೆ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಮಾತನಾಡಿ ನಿರುದ್ಯೋಗಿ ಯುವಕರಲ್ಲಿ ಈ ಯೋಜನೆ ಕ್ರಾಂತಿಕಾರಿ ಬದಲಾವಣೆ ಮಾಡಲಿದೆ. ಸರ್ಕಾರದ ಈ ಕಾರ್ಯಕ್ರಮ ಸ್ವಾಗತಾರ್ಹ. ಪ್ರಾದೇಶಿಕವಾಗಿ ಜಿಲ್ಲಾ ಮತ್ತು ತಾಲೂಕುವಾರು ಕೌಶಲ್ಯ ತರಬೇತಿ ನೀಡಲಾಗುವುದು ಎಂದರು. ರಾಯಭಾರಿ ನಟ, ಪುನೀತ್ ರಾಜಕುಮಾರ್ ಮಾತನಾಡಿ ಈ ಯೋಜನೆಗೆ ರಾಯಭಾರಿಯಾಗಿರುವುದು ಹೆಮ್ಮೆಯ ವಿಚಾರ. ಸರ್ಕಾರ ನನ್ನನ್ನು ರಾಯಭಾರಿಯಾಗಿ ನೇಮಕ ಮಾಡಿದ್ದಕ್ಕೆ ಸರ್ಕಾರಕ್ಕೆ ಅಭಿನಂಧನೆಗಳು.ದೇಶದಲ್ಲಿಯೇ ಈ ಯೋಜನೆ ಒಂದು ಮಾದರಿಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಮುರುಳಿಧರ್ ಹಾಲಪ್ಪ, ಸಚಿವರಾದ ರುದ್ರಪ್ಪ ಲಮಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: