ಲೈಫ್ & ಸ್ಟೈಲ್

ಬೊಜ್ಜು ಕರಗಿಸಿ ಆರೋಗ್ಯ ಕಾಪಾಡಿಕೊಳ್ಳಿ

ಈಗಿನ ಬದಲಾದ ಕಾಲಮಾನದಲ್ಲಿ ಹಾಗೂ ಹೊಸ ಹೊಸ ಆಹಾರಗಳಿಂದಾಗಿ, ಹೊಸ ಜೀವನ ಕ್ರಮದಿಂದಾಗಿ ಎಪ್ಪತ್ತು ಶೇಕಡಾದಷ್ಟು ಮಂದಿಗಳು ದಢೂತಿಗಳಾಗುತ್ತಿದ್ದಾರೆ. ಎಷ್ಟೋ ಜನ ದಢೂತಿಗಳಾಗಿ, ಎಲ್ಲರ ವ್ಯಂಗ್ಯ ಮಾತುಗಳಿಗೆ ತುತ್ತಾಗಿ, ಜೀವನದಲ್ಲಿ ಜಿಗುಪ್ಸೆಯನ್ನು ಹೋಂದುತ್ತಾರೆ. ಅಲ್ಲದೆ, ಜನಗಳಿರೋ ಪ್ರದೇಶಕ್ಕೆ ಬರುವುದಕ್ಕೆ ಇಚ್ಛಿಸುವುದಿಲ್ಲ.

ಬೊಜ್ಜು ಬರಲು ಕೆಲವು ಕಾರಣಗಳು :

  1. ಆಧುನಿಕ ಸೌಲಭ್ಯಗಳು ಜಾಸ್ತಿಯಾದಂತೆ, ಎಲ್ಲ ಕೆಲಸಗಳನ್ನು ಕುಳಿತಲ್ಲೇ ಮಾಡುವುದು.
  2. ಫಾಸ್ಟ್‌ಫುಡ್‌ಗಳ ಅತಿಯಾದ ಸೇವನೆ.
  3. ದೇಹಕ್ಕೆ ಸ್ವಲ್ಪವೂ ವ್ಯಾಯಾಮ ಕೊಡದೆ ಇರುವುದು.
  4. ಅತಿಯಾದ ನಾಲಿಗೆ ಚಪಲ.
  5. ಬೇಕರಿ ತಿಂಡಿಗಳ ಸೇವನೆ.

ಅತಿಯಾದ ಬೊಜ್ಜಿನಿಂದಾಗಿ ಆರೋಗ್ಯದ ಮೇಲಾಗುವ ಸಮಸ್ಯೆಗಳು

  1. ಅತಿಯಾದ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಹೃದಯದ ಕಾಯಿಲೆಗೆ ಸಂಬಂಧಿಸಿದ ಮರಣಗಳು. ಪಾರ್ಶ್ವವಾಯು ಮತ್ತು ಸಕ್ಕರೆ ಕಾಯಿಲೆಗಳು ಕೂಡ ಅತೀ ಬೇಗ ಬೊಜ್ಜು ಶರೀರದವರಿಗೆ ಬರುತ್ತದೆ. ಅಲ್ಲದೆ, ಹಲವು ವಿಧದ

ಕ್ಯಾನ್ಸರ್‌ಗಳು ಕೂಡ ಸ್ಥೂಲಕಾಯದವರಿಗೆ ಬರುವ ಸಾಧ್ಯತೆಗಳು ತುಂಬಾ ಇದೆ.

  1. ಸ್ಥೂಲಕಾಯದವರಿಗೆ ಬಹಳವಾಗಿ ಕಾಡುವ ಸಮಸ್ಯೆ ಎಂದರೆ ಮೂಳೆ ಸವೆತ. ಇದರಿಂದಾಗಿ ನಿಮ್ಮ ಕೆಲಸಗಳನ್ನು ನೀವೆ ಮಾಡಿಕೊಳ್ಳದಷ್ಟು ಬದುಕು ದುಸ್ತರವಾಗಿ ಹೋಗುತ್ತದೆ.
  2. ಅಲ್ಲದೆ, ಬೊಜ್ಜು ರೋಗಿಗಳು ನಿದ್ದೆಯ ಸಮಸ್ಯೆಯನ್ನು ಕೂಡ ಎದುರಿಸುತ್ತಾರೆ. ನಿದ್ದೆ ಮಾಡುತ್ತಿದ್ದಾಗ, ಬಾರಿ ಬಾರಿಗೆ ಉಸಿರು ಕಟ್ಟುತ್ತದೆ. ಇದು ತುಂಬಾ ಅಪಾಯಕರವಾಗಿದೆ.

fat-1-webಬೊಜ್ಜನ್ನು ಕರಗಿಸಲು ಕೆಲವು ಸಲಹೆಗಳು:

ಆಹಾರದ ಪ್ರಮಾಣವನ್ನು ಕಡಿಮೆ ಮಾಡುವುದು, ಎಣ್ಣೆ ಇರುವ ಆಹಾರವನ್ನು ಸೇವಿಸದಿರುವುದು ಇತ್ಯಾದಿ.

ಪ್ರತಿ ದಿನ ವ್ಯಾಯಾಮ ಮಾಡುವುದು. ಪದೇಪದೆ ವಿಶ್ರಾಂತಿಯನ್ನು ತೆಗೆದುಕೊಳ್ಳದಿರುವುದು, ಮನೆ ಕೆಲಸಗಳನ್ನು ಸ್ವತಃ ನಾವೇ ಮಾಡುವುದು. ಓಡುವುದು, ವಾಕಿಂಗ್ ಮತ್ತು ಸೈಕಲಿಂಗ್ ಮಾಡುವುದರಿಂದ ಕೂಡ ದೇಹದ ತೂಕವನ್ನು ನಿಯಂತ್ರಣಕ್ಕೆ ತರಬಹುದು. ದುಡ್ಡಿರುವವರು, ಹೊಟ್ಟೆ ಸರ್ಜರಿಯನ್ನು ಮಾಡುವುದರ ಮೂಲಕ ಸುಲಭವಾಗಿ ಬೊಜ್ಜನ್ನು ಕರಗಿಸಬಹುದು.

ಬೊಜ್ಜು ಕರಗಿಸುವ ಸಾಧನಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ, ಅವುಗಳನ್ನು ತೆಗೆದುಕೊಂಡು ವ್ಯಾಯಾಮ ಮಾಡುವುದರಿಂದ, ಬೊಜ್ಜು ಕಡಿಮೆಯಾಗುತ್ತದೆ. ಆದರೆ, ದಯವಿಟ್ಟು ಸಣ್ಣಗಾಗಲು ಯಾವುದೇ ಮಾತ್ರೆಗಳು ಅಥವಾ ಟಾನಿಕ್‌ಗಳನ್ನು ಸೇವಿಸಬೇಡಿ. ಇದರಿಂದ ನೀವು ಸಣ್ಣಗಾಗುವ ಬದಲು ಅನಾರೋಗ್ಯಕ್ಕೆ ತುತ್ತಾಗುವುದು ಗ್ಯಾರಂಟಿ.

ಇಂದಿನಿಂದಲೇ ನಿಮ್ಮ ದೇಹದ ಬಗ್ಗೆ ಗಮನ ಕೊಡಲು ಆರಂಭಿಸಿ. ಹೀಗೆ ಮಾಡಿದರೆ ನೀವು ಇತರರಿಂದ ಹೀಯಾಳಿಕೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಿ.

Leave a Reply

comments

Related Articles

error: