ಸುದ್ದಿ ಸಂಕ್ಷಿಪ್ತ

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಓಂ. ಶ್ರೀನಿಕೇತನ ಶಾಲೆ ಮತ್ತು ಕಾಲೇಜಿನ ಉತ್ತಮ ಸಾಧನೆ

ಮೈಸೂರು.ಮೇ.15 : ಶ್ರೀರಂಗಪಟ್ಟಣದ ಓಂ ಶ್ರೀನಿಕೇತನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ.ಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಯಶಸ್ ಎಂ. ಶೇ.93.50 ಅಂಕಗಳಿಂದ ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ರೂಪೇಶ್ ಶೇ. 91.16 ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರೌಢಶಾಲಾ ವಿಭಾಗದಲ್ಲಿ ಹದಿಯಾ ಸರ್ ವತ್ ಶ್ರೇ.92.96 ಮತ್ತು ಸುಹಾಸ್ ಶೇ. 90.72 ಗಳಿಸಿ ಕ್ರಮವಾಗಿ ಶಾಲೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ. 10 ಅತ್ಯುತ್ತಮ ಶ್ರೇಣಿ, 61 ಪ್ರಥಮ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯ ಮುಖ್ಯಸ್ಥರಾದ ಎಂ.ಪುಟ್ಟೇಗೌಡ, ಆರ್.ಎ.ಚೇತನ್ ರಾಮ್ ಮತ್ತು ಪ್ರಾಂಶುಪಾಲೆ ಅನುರಾಧ.ಕೆ. ಹಾಗೂ ಶಿಕ್ಷಕ ವೃಂದವು ಅಭಿನಂದಿಸಿ ಶುಭ ಹಾರೈಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: