ಮೈಸೂರು

ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ

ಮೈಸೂರು, ಮೇ ೧೫: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ನಗರ ಸಿಸಿಬಿ ಹಾಗೂ ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ.
ಅಜಿತ್, ಶೇಖರ್, ಸಂಪತ್ ಬಂಧಿತ ಆರೋಪಿಗಳು. ಈ ಮೂವರು, ನಗರ ರಾಮಕೃಷ್ಣನಗರದ ಇ ಮತ್ತು ಎಫ್ ಬ್ಲಾಕ್‌ನ ಸಾಯಿಬಾಬ ದೇವಸ್ಥಾನದ ರಸ್ತೆಯ ಮನೆ ನಂ.೧೪೨೪ ರಲ್ಲಿರುವ ಹೇರ್ ಕಟ್ಟಿಂಗ್ ಸಲೂನ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಮೂವರನ್ನು ಬಂಧಿಸಿ, ೮,೨೦೦ ರೂ. ನಗದು, ೫ ಮೊಬೈಲ್ ಫೋನ್, ೧ ಎಲ್‌ಇಡಿ ಟಿವಿ ಹಾಗೂ ಬೆಟ್ಟಿಂಗ್‌ಗೆ ಬಳಸಿದ್ದ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ ಬಿ.ಎಂ)

Leave a Reply

comments

Related Articles

error: