ಮೈಸೂರು

ಸಾಹಿತ್ಯ ಬದುಕನ್ನು ಸುಂದರವಾಗಿಸುತ್ತದೆ: ಕುಂ.ವೀರಭದ್ರಪ್ಪ

ಮೈಸೂರು, ಮೇ 15:-  ಸಾಹಿತ್ಯ ಬದುಕನ್ನು ಸುಂದರವಾಗಿಸುವುದಲ್ಲದೆ ಸಂತಸ ನೀಡುತ್ತದೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಸೋಮವಾರ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ವಿಜಯಲಕ್ಷ್ಮೀ ಪ್ರಕಾಶನ ಹಾಗೂ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ನೀಲಗಿರಿ ತಳವಾರ ಹಾಗೂ ಡಾ.ಯೋಗೇಶ್ ಸಂಪಾದಿಸಿರುವ ಬಸವರಾಜು ಕುಕ್ಕರಹಳ್ಳಿ ಕಥಾಲೋಕ ಪುಸ್ತಕ ಲೋಕಾರ್ಪಣೆ ಮತ್ತು ಕಥಾಸಂಭ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಸಾಹಿತ್ಯಕ್ಕೆ ಇನ್ನೊಬ್ಬರ ಬದುಕನ್ನು ಸುಖಕರವಾಗಿಸುವ ಶಕ್ತಿಯಿದೆ. ಹಾಗಾಗಿ ಪ್ರತಿಯೊಬ್ಬರು ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕು. ಕಥಾ ಸಾಹಿತ್ಯಗಳು ಎಲ್ಲರನ್ನು ಸಂತಸಗೊಳಿಸಲಿದ್ದು ಕಥಾ ಸಾಹಿತ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಅಬ್ದುಲ್ ರಶೀದ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಡಾ.ಪ್ರೀತಿ ಶ್ರೀಮಂಧರಕುಮಾರ್, ಲೇಖಕ ಬಸವರಾಜು ಕುಕ್ಕರಹಳ್ಳಿ, ಡಾ.ನೀಲಗಿರಿ ತಳವಾರ, ಡಾ.ಎನ್.ಯೋಗೇಶ್, ಭವಾನಿ ಸಂಜಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ,ಎಸ್.ಎಚ್)

Leave a Reply

comments

Related Articles

error: