ಮೈಸೂರು

“ಗರ್ಭಾವಸ್ಥೆ ಮತ್ತು ಪ್ರಸವದ ನಂತರದ ಆಹಾರ ಕ್ರಮ ಮತ್ತು ಆರೋಗ್ಯ ವಿಶೇಷ ಕಾರ್ಯಕ್ರಮ

ಮೈಸೂರು, ಮೇ.15:- ಕ್ರೆಡಿಟ್ – ಐ ಸಂಸ್ಥೆಯಿಂದ  ವಿಶ್ವ ತಾಯಂದಿರ ದಿನಾಚರಣೆಯ ಅಂಗವಾಗಿ ಕ್ರೆಡಿಟ್ – ಐ (ಭಾರತೀಯ ಗ್ರಾಮೀಣ ಶೈಕ್ಷಣಿಕ ಅಭಿವೃದ್ಧಿ ಹಾಗೂ ಆವಿಷ್ಕಾರಿ ತಂತ್ರಜ್ಞಾನ ಕೇಂದ್ರ), ಮೈಸೂರು ಹಾಗೂ ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರ್ ಸೆಂಟ್ರಲ್ ಇವರ ಸಹಯೋಗದಲ್ಲಿ ಮೈಸೂರಿನ ಭಾರತ್‍ನಗರದ ಸಮುದಾಯ ಭವನದಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗಾಗಿ “ಗರ್ಭಾವಸ್ಥೆ ಮತ್ತು ಪ್ರಸವದ ನಂತರದ ಆಹಾರ ಕ್ರಮ ಮತ್ತು ಆರೋಗ್ಯ” ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮಕ್ಕೆ ಡಾ. ಎಂ.ಪಿ. ವರ್ಷರವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಗರ್ಭಾವಸ್ಥೆಯಲ್ಲಿ ಮಗು ಹಾಗೂ ತಾಯಂದಿರ ತೂಕದಲ್ಲಿ ಆಗಬೇಕಾದ ಹೆಚ್ಚಳದ ಕ್ರಮ ಹಾಗೂ ಅವಶ್ಯಕತೆ, ಗರ್ಭದಲ್ಲಿ ಮಗುವಿನ ಬೆಳವಣಿಗೆಯ ರೀತಿ, ಸೇವಿಸ ಬೇಕಾದ ಹಾಗೂ ಸೇವಿಸಬಾರದ ಆಹಾರಗಳು, ಕ್ರಮಾನುಗತವಾಗಿ ವೈಧ್ಯಕೀಯ ಪರೀಕ್ಷೆಯ ಅಗತ್ಯತೆ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಆಹಾರ ತಜ್ಞರಾದ ಪ್ರಿಯಾಂಕ ಹಾಗೂ ರಶ್ಮಿಯವರು ಉತ್ತಮ ತಾಯ್ತನಕ್ಕಾಗಿ, ಗರ್ಭಧಾರಣೆ ಹಾಗೂ ಪ್ರಸವದ ನಂತರ (ಬಾಣಂತಿ)ದ ಅವಧಿಯಲ್ಲಿ ಸೇವಿಸಬೇಕಾದ ಆಹಾರ ಕ್ರಮದ ಬಗ್ಗೆ ವಿವರಿಸಿದರು.

ಈ ಸಂದರ್ಭ  ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರ್ ಸೆಂಟ್ರಲ್  ಮುಂದಿನ ಅಧ್ಯಕ್ಷೆ ಸೌಮ್ಯ ದಿನೇಶ್, ವ್ಯವಸ್ಥಾಪಕ ಟ್ರಸ್ಟಿ ಹಾಗೂ ಸಿ.ಇ.ಓ ಗಳು ಭಾಗವಹಿಸಿದ್ದರು. ಈ ಸಂದರ್ಭ ಭಾಗವಹಿಸಿದ ಎಲ್ಲಾ ಮಹಿಳೆಯರ ತೂಕ, ರಕ್ತದ ಒತ್ತಡ ಹಾಗೂ ಸಕ್ಕರೆ ಅಂಶದ ಪರೀಕ್ಷೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾರತ್‍ನಗರ, ನೆಹರೂ ನಗರ ಮೊದಲಾದ ಪ್ರದೇಶಗಳ ಸುಮಾರು 50 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. – (ವರದಿ:ಜಿ.ಕೆ,ಎಸ್.ಎಚ್)

Leave a Reply

comments

Related Articles

error: