ಸುದ್ದಿ ಸಂಕ್ಷಿಪ್ತ

ಬಸವೇಶ್ವರ ಜಯಂತಿ ಹಾಗೂ ವಿಶ್ವ ತಾಯಂದಿರ ದಿನಾಚರಣೆ ಮೇ.16ಕ್ಕೆ

ಮೈಸೂರು.ಮೇ.15 : ಬಸವೇಶ್ವರ ಜಯಂತಿ ಹಾಗೂ ವಿಶ್ವ ತಾಯಂದಿರ ದಿನಾಚರಣೆಯಂಗವಾಗಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದಿಂದ ವಿದ್ಯಾರಣ್ಯಪುರಂನ ಭಾರತಿ ವೃದ್ಧಾಶ್ರಮದಲ್ಲಿ ಹಣ್ಣು ಹಂಪಲು ಹಾಗೂ ಇತರೆ ಅವಶ್ಯ ವಸ್ತುಗಳ ವಿತರಣೆಯನ್ನು ಮೇ.16ರ ಮಧ್ಯಾಹ್ನ 12.30ಕ್ಕೆ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೊಸಮಠದ ಚಿದಾನಂದಸ್ವಾಮೀಜಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್, ಮಹಾನಗರಪಾಲಿಕೆ ಸದಸ್ಯ ಮಾ.ವಿ.ರಾಮ ಪ್ರಸಾದ್ ಹಾಗೂ ಇತರರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: