Uncategorizedಮೈಸೂರು

ಸ್ವಚ್ಛತೆಗೆ ಆದ್ಯತೆ ನೀಡಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ: ಮೇಯರ್ ರವಿಕುಮಾರ್

ಮೈಸೂರು, ಮೇ ೧೫: ನಗರದ ಕೆಲ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಶುಚಿತ್ವದ ಸಮಸ್ಯೆ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಮೇಯರ್ ಎಂ.ಜೆ.ರವಿಕುಮಾರ್ ಸೋಮವಾರ ವಿವಿಧ ಬಡಾವಣೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಆಯುಕ್ತರು, ನಗರ ಪಾಲಿಕೆ ಸದಸ್ಯರೊಂದಿಗೆ ೫೩ನೇ ವಾರ್ಡಿನ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಮೇಯರ್ ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಕಂಡು ಬೆರಗಾದರು. ಲಿಡ್ಕರ್ ಕಾಲೋನಿ, ಕೃಷ್ಣನ್ ಕಾಲೋನಿ, ರಾಜೀವ್ ನಗರ ೨ನೇ ಹಂತ ಹಾಗೂ ಹುಡ್ಕೋ ಬಡಾವಣೆಗಳಲ್ಲಿ ಅಶುಚಿತ್ವ ತಾಂಡವವಾಡುತ್ತಿತ್ತು. ಇದನ್ನು ಕಂಡು ಕೆಂಡಾಮಂಡಲರಾದ ಮೇಯರ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲಿದ್ದ ಅಧಿಕಾರಿಗಳ ವಿರುದ್ಧ ಕಿರಿಕಾರಿದ ಅವರು ಕೂಡಲೇ ಕಸದ ಸಮಸ್ಯೆಯನ್ನು ಬಗೆಹರಿಸಿ, ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.
ಈ ವೇಳೆ ಮಾತನಾಡಿದ ಅವರು, ಮೈಸೂರು ಎರಡು ಸ್ವಚ್ಛ ನಗರಿ ಪ್ರಶಸ್ತಿ ಪಡೆದುಕೊಂಡಿದೆ. ಮೂರನೇ ಬಾರಿಯೂ ಪಡೆಯುವ ನಿಟ್ಟಿನಲ್ಲಿ ಹಿನ್ನೆಡೆಯಾಗಿದ್ದು ೫ನೇ ಸ್ಥಾನಕ್ಕೆ ತಳ್ಳಲ್ಪಟ್ಟಿzವೆ. ಹಾಗಾಗಿ ಮತ್ತೆ ನಂ.೧ ಆಗಲು ಶ್ರಮಿಸಬೇಕಿದ್ದು ನಗರದ ಎಲ್ಲಾ ಬಡಾವಣೆಗಳಲ್ಲು ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ. ಚರಂಡಿಯಲ್ಲಿ ಹೂಳು ತೆಗೆಯಲು ೫೩ನೇ ವಾರ್ಡಿಗೆ ೧೫ ಲಕ್ಷ ರೂ ಮಂಜೂರು ಮಾಡಲಾಗಿದೆ. ಇಲ್ಲಿನ ರಸ್ತೆ ರುರಸ್ತಿ ಮಾಡಿಸಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಸಂದೇಶ್ ಸ್ವಾಮಿ, ಪಾಲಿಕೆ ಸದಸ್ಯ ಫೈರಾಜ್ ಖಾನ್, ಪಾಲಿಕೆ ಕಾರ್ಯಪಾಲಕ ಅಭಿಯಂತರ ಸುರೇಶ್ ಬಾಬು, ಯುಜಿಡಿ ಕಾರ್ಯಪಾಲಕ ಅಭಿಯಂತರ ಸುಬ್ರಮಣ್ಯ, ಯುಜಿಡಿ ಎಇಇ ರವಿ, ವಾಣಿವಿಲಾಸ ಎಇಇ ಆನಂದಮೂರ್ತಿ, ವಲಯ ೮ರ ಅಭಿವೃದ್ಧಿ ಅಧಿಕಾರಿ ಭರತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: