ಸುದ್ದಿ ಸಂಕ್ಷಿಪ್ತ

ಮಹಾರಾಜ ಸಂಸ್ಕೃತ ಕಾಲೇಜಿಗೆ ಪ್ರವೇಶ ಆರಂಭ

ಮೈಸೂರು.ಮೇ.15 : ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ 2017-18ನೇ ಸಾಲಿನಲ್ಲಿ ಶಾಸ್ತ್ರಾಧ್ಯಯನ, ವೇದಾಧ್ಯಯನ ಹಾಗೂ ಆಗಮಾಧ್ಯಯನದ ತರಗತಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಮೇ.20ರಿಂದ ಪ್ರವೇಶ ಪತ್ರಗಳು ಲಭ್ಯವಿದೆ.

ಆಗಮ ಪ್ರವರ ಮತ್ತು ಆಗಮ ಪ್ರವೀಣ ತರಗತಿಗಳಿಗೆ ಉಚಿತ ಪ್ರವೇಶವಿದೆ. ವೇದ ಹಾಗೂ ಶಾಸ್ತ್ರಗಳ ಸ್ನಾತಕ ಹಾಗೂ ಸ್ನಾತಕೋತ್ತರ ತರಗತಿಗಳಿಗೆ ಕರ್ನಾಟಕ ಸಂಸ್ಕೃತ ವಿವಿಯು ನಿಗದಿಪಡಿಸಿದ ಶುಲ್ಕವನ್ನು ವಿಧಿಸಲಾಗುವುದು.

ಅರ್ಹರಾದ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯದಲ್ಲಿ ಬೇಟಿಯಾಗಬಹುದು.(ಕೆ.ಎಂ.ಆರ್)

Leave a Reply

comments

Related Articles

error: