ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಇಂಗ್ಲೆಂಡ್ ಟೆಸ್ಟ್ ಗೂ ಮುನ್ನ ಟೀಂ ಇಂಡಿಯಾಗೆ ಆಘಾತ : ವಿರಾಟ್ ಕೊಹ್ಲಿಗೆ ಕೋವಿಡ್ ಪಾಸಿಟಿವ್

ವಿದೇಶ(ಲಂಡನ್),ಜೂ.22:- ಭಾರತ ಮತ್ತು ಇಂಗ್ಲೆಂಡ್ (IND vs ENG) ಟೆಸ್ಟ್ ಸರಣಿಯ ಆಟಗಾರರು ಮತ್ತೊಮ್ಮೆ ಕೊರೋನಾ ಭೀತಿಯಲ್ಲಿದ್ದಾರೆ.

ಕಳೆದ ವರ್ಷ ಕೊರೊನಾ ಕಾರಣ 5ನೇ ಟೆಸ್ಟ್ ಮುಂದೂಡಲಾಗಿತ್ತು. ಈಗಾಗಲೇ ಇಂಗ್ಲೆಂಡ್ ಶಿಬಿರದಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿದೆ. ತಂಡದ ಬ್ಯಾಟಿಂಗ್ ಕೋಚ್ ಮಾರ್ಕಸ್ ಟ್ರೆಸ್ಕೋಥಿ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇದಲ್ಲದೆ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಕೊರೊನಾ ಪಾಸಿಟಿವ್ ಎಂದು ಕಂಡುಬಂದಿದೆ. ಇದರಿಂದಾಗಿ ಅವರು ಇಂಗ್ಲೆಂಡ್‌ ಗೆ ತೆರಳಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ತಲುಪುವ ಮೊದಲು ಕೊರೋನಾ ವರದಿ ಪಾಸಿಟಿವ್ ಬಂದಿತ್ತು ಎನ್ನಲಾಗಿದೆ.
ಕುಟುಂಬದೊಂದಿಗೆ ರಜೆಯ ನಂತರ ಮಾಲ್ಡೀವ್ಸ್‌ ನಿಂದ ಹಿಂದಿರುಗಿದ ಬಳಿಕ ಕೊರೋನಾ ಸೋಂಕಿಗೆ ಒಳಗಾಗಿದ್ದರು ಆದರೆ ಈಗ ಅವರು ಚೆನ್ನಾಗಿದ್ದಾರೆ. ರಜೆ ಮುಗಿಸಿ ಹಿಂತಿರುಗಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಕೊಹ್ಲಿ ಕೂಡ ಕಾಣಿಸಿಕೊಂಡಿದ್ದರು. ಆದಾಗ್ಯೂ ಅವರು ಲೀಸೆಸ್ಟರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡುವುದನ್ನು ಕಾಣಬಹುದು. ಅದೇ ವೇಳೆ ಕೊರೋನಾದಿಂದ ಚೇತರಿಸಿಕೊಳ್ಳುವ ಆಟಗಾರರ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಲು ತಂಡದ ಆಡಳಿತವು ಇಷ್ಟಪಡುವುದಿಲ್ಲ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: