ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಮೂರನೇ ಟೆಸ್ಟ್‌ ಗೆ ಪ್ಲೇಯಿಂಗ್ 11 ತಂಡ ಘೊಷಿಸಿದ ಇಂಗ್ಲೆಂಡ್

ವಿದೇಶ(ಲಂಡನ್),ಜೂ.23:- ಮೂರು ಟೆಸ್ಟ್‌ ಗಳ ಸರಣಿಯ ಕೊನೆಯ ಪಂದ್ಯ ಜೂನ್ 23 ರಿಂದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ.

ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ಇಂಗ್ಲೆಂಡ್ ತನ್ನ ಪ್ಲೇಯಿಂಗ್ 11 ಘೋಷಿಸಿದೆ. ಇಂಗ್ಲೆಂಡ್‌ ನ ಸ್ಟಾರ್ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಗಾಯದ ಕಾರಣ ಕೊನೆಯ ಟೆಸ್ಟ್‌ ನ ಭಾಗವಾಗಿಲ್ಲ. ಅವರ ಸ್ಥಾನದಲ್ಲಿ ಜಿಮಿ ಓವರ್‌ಟನ್‌ಗೆ ಪದಾರ್ಪಣೆ ಮಾಡುವ ಅವಕಾಶವನ್ನು ಇಂಗ್ಲೆಂಡ್ ನೀಡಿದೆ. ಇಂಗ್ಲೆಂಡ್ ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಜಿಮಿ ಓವರ್ಟನ್ ಆಟದ ಬಗ್ಗೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮಾಹಿತಿ ನೀಡಿದರು. ಜೇಮ್ಸ್ ಆಂಡರ್ಸನ್ ಈ ಪಂದ್ಯದ ಭಾಗವಾಗುವುದಿಲ್ಲ ಎಂದು ಅವರು ಹೇಳಿದರು. ಜಿಮಿ ಓವರ್‌ಟನ್‌ಗೆ ಪದಾರ್ಪಣೆ ಮಾಡುವ ಅವಕಾಶ ಸಿಗಲಿದೆ. ಗುರುವಾರದಿಂದ ಆರಂಭವಾಗಲಿರುವ ಪಂದ್ಯದಲ್ಲಿ ಅವರು ಪ್ಲೇಯಿಂಗ್ 11ರ ಭಾಗವಾಗಲಿದ್ದಾರೆ.
28ರ ಹರೆಯದ ಜಿಮಿ ಓವರ್ಟನ್ ಕೌಂಟಿ ಕ್ರಿಕೆಟ್ ನಲ್ಲಿ ಅತ್ಯುತ್ತಮ ಫಾರ್ಮ್ ತೋರಿದ್ದಾರೆ. ಸರ್ರೆ ಪರ ಆಡುತ್ತಿರುವ ಓವರ್ಟನ್ ಐದು ಪಂದ್ಯಗಳಲ್ಲಿ 21 ವಿಕೆಟ್ ಪಡೆದಿದ್ದಾರೆ. ಆದಾಗ್ಯೂ, ಓವರ್ಟನ್ ತನ್ನ ಅವಳಿ ಸಹೋದರ ಕ್ರೇಗ್ ಜೊತೆಗೆ ಆಡಲು ಅವಕಾಶವನ್ನು ಪಡೆಯಲಿಲ್ಲ. ಕ್ರೇಗ್ ಈ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ.
ಓವರ್‌ಟನ್ ಹೊರತುಪಡಿಸಿ ಇಂಗ್ಲೆಂಡ್ ಪ್ಲೇಯಿಂಗ್ 11ರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳಪೆ ಫಾರ್ಮ್‌ನಿಂದ ಕಂಗೆಟ್ಟಿರುವ ಆರಂಭಿಕ ಆಟಗಾರ ಜಾಕ್ ಕ್ರೌಲಿಗೆ ಮತ್ತೊಂದು ಅವಕಾಶ ನೀಡಲು ಇಂಗ್ಲೆಂಡ್ ತಂಡ ನಿರ್ಧರಿಸಿದೆ. ಅದೇ ಸಮಯದಲ್ಲಿ, ಕೋವಿಡ್ 19 ಸೋಂಕಿನಿಂದ ಗುಣಮುಖರಾದ ನಂತರ ಬೆನ್ ಸ್ಟೋಕ್ಸ್ ಕೊನೆಯ ಪಂದ್ಯಕ್ಕೆ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ.
ಇಂಗ್ಲೆಂಡ್‌ನ ಪ್ಲೇಯಿಂಗ್ 11 : ಅಲೆಕ್ಸ್ ಲೀ, ಜ್ಯಾಕ್ ಕ್ರೌಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್ (c), ಬೆನ್ ಫಾಕ್ಸ್ (WK), ಮ್ಯಾಟಿ ಪಾಟ್ಸ್, ಜಿಮಿ ಓವರ್‌ಟನ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: