ಕ್ರೀಡೆಪ್ರಮುಖ ಸುದ್ದಿವಿದೇಶ

ಶ್ರೀಲಂಕಾ ಪ್ರವಾಸಕ್ಕಾಗಿ ಬಾಬರ್ ಅಜಮ್ ಪಾಕಿಸ್ತಾನ ತಂಡದ ನಾಯಕ !

ದೇಶ(ನವದೆಹಲಿ),ಜೂ.23:- ಪಾಕಿಸ್ತಾನದ ಲೆಗ್ ಸ್ಪಿನ್ನರ್ ಯಾಸಿರ್ ಶಾ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ವಾಸ್ತವವಾಗಿ ಪಾಕಿಸ್ತಾನ ತಂಡವು ಶ್ರೀಲಂಕಾ ಪ್ರವಾಸಕ್ಕೆ ಹೋಗಲಿದೆ.

ಪ್ರವಾಸಿ ತಂಡ ಈ ಪ್ರವಾಸದಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. 36ರ ಹರೆಯದ ಲೆಗ್ ಸ್ಪಿನ್ನರ್ ಯಾಸಿರ್ ಶಾ ಅವರನ್ನು 18 ಮಂದಿಯ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆಲ್ ರೌಂಡರ್ ಮೊಹಮ್ಮದ್ ನವಾಜ್ ಕೂಡ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಇದಕ್ಕೂ ಮುನ್ನ ಆಲ್ ರೌಂಡರ್ ಮೊಹಮ್ಮದ್ ನವಾಜ್ ಅವರನ್ನು ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಸೇರಿಸಿಕೊಳ್ಳಲಾಗಿತ್ತು ಆದರೆ ಗಾಯದ ಕಾರಣ ಆ ಸರಣಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಅದೇ ಸಮಯದಲ್ಲಿ, ಅನ್‌ಕ್ಯಾಪ್ಡ್ ಆಟಗಾರ ಸಲ್ಮಾನ್ ಅಲಿ ಅಘಾ ಕೂಡ ಸೇರ್ಪಡೆಗೊಂಡಿದ್ದಾರೆ.
ಯಾಸಿರ್ ಶಾ ತಮ್ಮ ಕೊನೆಯ ಟೆಸ್ಟ್ ನ್ನು ಆಗಸ್ಟ್ 2021 ರಲ್ಲಿ ಆಡಿದ್ದರು. 2015ರಲ್ಲಿ ಶ್ರೀಲಂಕಾ ನೆಲದಲ್ಲಿ ಪಾಕಿಸ್ತಾನ ಸರಣಿ ಗೆದ್ದಿತ್ತು. ಆ ಸರಣಿಯಲ್ಲಿ ಯಾಸಿರ್ ಶಾ ಅದ್ಭುತ ಪ್ರದರ್ಶನ ನೀಡಿದರು. ಶ್ರೀಲಂಕಾ ವಿರುದ್ಧದ ಆ ಸರಣಿಯಲ್ಲಿ ಅವರು 19.33 ಸರಾಸರಿಯಲ್ಲಿ 24 ವಿಕೆಟ್‌ ಗಳನ್ನು ಪಡೆದರು. ಯಾಸಿರ್ ಶಾ ವಾಪಸಾತಿ ನಮ್ಮ ಸ್ಪಿನ್ ಬೌಲಿಂಗ್ ಅನ್ನು ಬಲಪಡಿಸಿದೆ ಎಂದು ಪಾಕಿಸ್ತಾನದ ಮುಖ್ಯ ಆಯ್ಕೆಗಾರ ಮೊಹಮ್ಮದ್ ವಾಸಿಮ್ ಹೇಳಿದ್ದಾರೆ. ಕಳೆದ ಶ್ರೀಲಂಕಾ ಪ್ರವಾಸದಲ್ಲಿ ಅವರು ನಮಗೆ ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತುಪಡಿಸಿದ್ದರು ಎಂದಿದ್ದಾರೆ.
ಶ್ರೀಲಂಕಾ ಪ್ರವಾಸಕ್ಕೆ ಪಾಕಿಸ್ತಾನ ತಂಡ ಹೀಗಿದೆ
ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಅಜರ್ ಅಲಿ, ಫಹೀಮ್ ಅಶ್ರಫ್, ಫವಾದ್ ಆಲಂ, ಹಾರಿಸ್ ರೌಫ್, ಹಸನ್ ಅಲಿ, ಇಮಾಮ್-ಉಲ್-ಹಕ್, ಮೊಹಮ್ಮದ್ ನವಾಜ್, ನುಮಾನ್ ಅಲಿ, ಸಲ್ಮಾನ್ ಅಲಿ ಅಘಾ, ಸರ್ಫರಾಜ್ ಅಹ್ಮದ್ ( wk) , ಸೌದ್ ಶಕೀಲ್, ಶಾಹೀನ್ ಅಫ್ರಿದಿ, ಶಾನ್ ಮಸೂದ್, ಯಾಸಿರ್ ಶಾ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: