
ಕರ್ನಾಟಕಪ್ರಮುಖ ಸುದ್ದಿಮನರಂಜನೆ
ನಟ ದಿಗಂತ್ ಆಸ್ಪತ್ರೆಯಿಂದ ಡಿಸ್ಚಾಜ್
ರಾಜ್ಯ(ಬೆಂಗಳೂರು),ಜೂ.23 : – ಗೋವಾ ಟ್ರಿಪ್ಗೆ ಹೋಗಿ ಸೊಮರ್ ಸಾಲ್ಟ್ನಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದ ದಿಗಂತ್ ಅವರ ಆರೋಗ್ಯದಲ್ಲಿ ಭಾರೀ ಚೇತರಿಕೆ ಕಾಣಿಸಿಕೊಂಡಿದೆ. ನಿನ್ನೆ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಇಂದು ಅವರನ್ನು ಐಸಿಯುನಲ್ಲಿ ಇಡಲಾಗಿತ್ತು. ಇದೀಗ ನಟ ದಿಗಂತ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಗೋವಾದ ಕಡಲ ತೀರದಲ್ಲಿ ಸೊಮರ್ ಸಾಲ್ಟ್ ಜಂಪ್ ಮಾಡಲು ಹೋಗಿ ದಿಗಂತ್ ಸ್ಪೈಲನ್ ಕಾರ್ಡ್ಗೆ ಗಾಯ ಮಾಡಿಕೊಂಡಿದ್ದರು. ಬಳಿಕ ಏರ್ಲಿಫ್ಟ್ ಮೂಲಕ ಕರೆತಂದು ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಮೂರು ಗಂಟೆಗಳ ಕಾಲ ಆಪರೇಷನ್ ಮಾಡಿದ್ದರು. ಆರೋಗ್ಯದಲ್ಲಿ ಸ್ಥಿರವಿರುವ ಕಾರಣ ನಟ ದಿಗಂತ್ ಅವರನ್ನು ಮನೆಯಲ್ಲಿಯೇ ಮೂರು ತಿಂಗಳು ಬೆಡ್ ರೆಸ್ಟ್ ಮಾಡಲು ಡಾ.ವಿಧ್ಯಾಧರ್ ತಿಳಿಸಿದ್ದಾರೆ ಎನ್ನಲಾಗಿದೆ.(ಎಸ್.ಎಂ)