ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಪ್ರೊಡಕ್ಷನ್ ನಂ.27ಕ್ಕೆ ನೆರವೇರಿದ ಮುಹೂರ್ತ

ರಾಜ್ಯ(ಬೆಂಗಳೂರು),ಜೂ.23 :- ಇದೇ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ತೆರೆ ಹಂಚಿಕೊಳ್ಳುತ್ತಿದ್ದು, ಈ ಸಿನಿಮಾದ ಮುಹೂರ್ತ ಇಂದು ಬೆಂಗಳೂರಿನಲ್ಲಿ ನಡೆದಿದೆ.

ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಸಿನಿಮಾದಲ್ಲಿ ಹೊಸ ಬಗೆಯ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರಂತೆ ನಿರ್ದೇಶಕರು. ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾಗೆ ಸದ್ಯಕ್ಕೆ ಪ್ರೊಡಕ್ಷನ್ ನಂ.27 ಎಂದು ಹೆಸರಿಡಲಾಗಿದೆ.

ಮಹೂರ್ತ ಸಮಾರಂಭಕ್ಕೆ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಹಾಜರಿದ್ದರು. ರಾಕ್ ಲೈನ್ ಸ್ಟುಡಿಯೋದಲ್ಲಿರುವ ದೇವಸ್ಥಾನದಲ್ಲೇ ಸಿನಿಮಾದ ಮುಹೂರ್ತ ನಡೆಯಿತು. ಮೊದಲ ಬಾರಿಗೆ ಶಿವರಾಜ್ ಕುಮಾರ್ ಜೊತೆ ಪ್ರಭುದೇವ ನಡೆಸುತ್ತಿದ್ದರೂ, ಇಂದು ಅವರು ಮುಹೂರ್ತಕ್ಕೆ ಹಾಜರಾಗಿರಲಿಲ್ಲ. ಬೇರೊಂದು ಕಾರ್ಯದಲ್ಲಿ ಅವರು ಬ್ಯುಸಿ ಆಗಿರುವುದರಿಂದ ವಿಡಿಯೋ ಸಂದೇಶವೊಂದನ್ನು ಅವರು ಕಳುಹಿಸಿದ್ದರು.

ಸಿನಿಮಾ ಮಹೂರ್ತಕ್ಕೆ ಹಾಜರಾಗಲು ಆಗುತ್ತಿಲ್ಲ. ಹಾಗಾಗಿ ಕ್ಷಮೆ ಕೇಳುತ್ತೇನೆ. ನಾನೇನಾದರೂ ತಪ್ಪು ಮಾಡಿದರೆ ಎಕ್ಸ್ ಕ್ಯೂಸ್ ಮಾಡಿಕೊಳ್ಳಿ. ನಾನು ಪ್ರಬುದ್ಧ ನಟನಲ್ಲ. ನಾನು ಅಷ್ಟು ಮೆಚ್ಯುರ್ ಆಗಿರೋನಲ್ಲ ಎಂದು ಪ್ರಭುದೇವ್ ವಿಡಿಯೋದಲ್ಲಿ ಹೇಳಿದ್ದಾರೆ. ಶಿವರಾಜ್ ಕುಮಾರ್ ಅವರ ಜೊತೆ ಕೆಲಸ ಮಾಡಬೇಕು ಎನ್ನುವುದು ನನ್ನ ಆಸೆ ಆಗಿತ್ತು. ಅದೀಗ ನೆರವೇರುತ್ತಿದೆ ಎಂದೂ ಅವರು ವಿಡಿಯೋದಲ್ಲಿ ಹೇಳಿದ್ದಾರೆ.(ಎಸ್.ಎಂ)

Leave a Reply

comments

Related Articles

error: