ದೇಶಪ್ರಮುಖ ಸುದ್ದಿಮನರಂಜನೆ

ಗಿಡ ನೆಡುವ ಮೂಲಕ ಗ್ರೀನ್ ಇಂಡಿಯಾ ಅಭಿಯಾನಕ್ಕೆ ಸಾಥ್ ನೀಡಿದ ಸಲ್ಮಾನ್ ಖಾನ್

ದೇಶ(ನವದೆಹಲಿ),ಜೂ.23 :- ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ‘ಕಭಿ ಈದ್ ಕಭಿ ದಿವಾಲಿ’ ಚಿತ್ರೀಕರಣಕ್ಕಾಗಿ ಹೈದರಾಬಾದನಲ್ಲಿ ಬೀಡು ಬಿಟ್ಟಿದ್ದು, ಈ ವೇಳೆ ಗ್ರೀನ್ ಇಂಡಿಯಾ ಅಭಿಯಾನಕ್ಕೆ ಗಿಡ ನೆಡುವ ಮೂಲಕ   ಸಾಥ್ ನೀಡಿದ್ದಾರೆ.

ಸಲ್ಮಾನ್ ಖಾನ್ ಬತ್ತಳಿಕೆಯಲ್ಲಿ ಸಾಕಷ್ಟು ಚಿತ್ರಗಳಿವೆ‌. ಸದ್ಯ ‘ಕಭಿ ಈದ್ ಕಭಿ ದಿವಾಲಿ’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ರಾಜ್ಯ ಸಭಾ ಎಪಿ ಮತ್ತು ಗ್ರೀನ್ ಇಂಡಿಯಾ ಸಂಸ್ಥಾಪಕರಾಗಿರುವ ಜೆ.ಸಂತೋಷ್ ಕುಮಾರ್ ಅವರ ವಿನಂತಿಯ ಮೇರೆಗೆ ಗಿಡ ನೆಟ್ಟಿದ್ದಾರೆ.

ಗ್ರೀನ್ ಇಂಡಿಯಾ ಚಾಲೆಂಜ್ ಪ್ರಯುಕ್ತ ಹೈದರಾಬಾದ್ ನ ರಾಮೋಜಿ ಫಿಲ್ಮಂ ಸಿಟಿಯಲ್ಲಿ ಸಲ್ಮಾನ್ ಖಾನ್ ಗಿಡ ನೆಡುವ ಮೂಲಕ ಅಭಿಮಾನಿಗಳು ಗಿಡ ನೆಡುವಂತೆ ಮನವಿ ಮಾಡಿದ್ದಾರೆ.

ಗ್ಲೋಬಲ್ ವಾರ್ಮಿಂಗ್ ನಿಯಂತ್ರಣ ಮಾಡುವ ದೃಷ್ಟಿಯಿಂದ ಸಲ್ಮಾನ್ ಖಾನ್ ತಾವು ಕೂಡ ಗಿಡ ನೆಟ್ಟಿರುವುದಲ್ಲದೇ, ಅಭಿಮಾನಿಗಳಿಗೂ ಗಿಡ ನೆಡುವಂತೆ ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಕೆಲಸದ ಮಧ್ಯೆಯೂ ಕೂಡ ಸಲ್ಮಾನ್ ಖಾನ್ ಸಮಾಜಮುಖಿ ಕಾರ್ಯಕ್ಕೆ ಫ್ಯಾನ್ಸ್ ಭೇಷ್ ಅಂತಿದ್ದಾರೆ.(ಎಸ್.ಎಂ)

Leave a Reply

comments

Related Articles

error: