ಮೈಸೂರು

ಅಗ್ನಿಪಥ್ ವಿರೋಧಿಸಿ ನಾಳೆ ಸಾಂಕೇತಿಕ ಪ್ರತಿಭಟನೆ ; ಜು.11ರಂದು ಸಿಎಂ ಮನೆಗೆ ಮುತ್ತಿಗೆ ; ಬಡಗಲಪುರ ನಾಗೇಂದ್ರ

ಮೈಸೂರು,ಜೂ.23:- ಯೋಗ ದಿನಾಚರಣೆ ಭಾರತದ ಅಭಿವೃದ್ಧಿ ಪಥ ಎಂದು ಬಿಂಬಿಸಿದರು. ಪಠ್ಯಪುಸ್ತಕಗಳಲ್ಲಿ ಕುವೆಂಪು, ಅಂಬೇಡ್ಕರ್, ಬಸವಣ್ಣ ರವರ ವಿಚಾರಗಳನ್ನು ಬುಡಮೇಲು ಮಾಡುತ್ತಿರುವ ಬಗ್ಗೆ ಪ್ರಧಾನಿ ಗಳು ಯಾವುದೇ ಮಾತನಾಡಲಿಲ್ಲ. ಆಡಳಿತದ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಯವರ  ಕೊಡುಗೆ ಏನು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಪ್ರಶ್ನಿಸಿದರು.

ಜಲದರ್ಶಿನಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಬ್ಬು ಬೆಳೆಗೆ ಎಫ್.ಆರ್.ಪಿ ದರ ಹೆಚ್ಚಳ ಮಾಡಬೇಕು. ಕಬ್ಬು ನಿಯಂತ್ರಣ ಮಂಡಳಿ ಸಭೆ ನಡೆದಿಲ್ಲ. ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರ ಬಾಕಿ ಹಣ ಕೊಟ್ಟಿಲ್ಲ. ಕಾರ್ಖಾನೆಗಳು ತೂಕದಲ್ಲಿ ಮೋಸ ಆಗ್ತಾ ಇದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದರೂ ಏನೂ ಉತ್ತರ ಇಲ್ಲ ಎಂದರು.

ಸಮಗ್ರ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಇಟ್ಟುಕೊಂಡು , ನಂಜುಂಡ ಸ್ವಾಮಿ ಅವರು ಇದ್ದಾಗ ಕರ ನಿರಾಕರಣೆ ಚಳುವಳಿ ನಡೆದಿತ್ತು.  ಈ ಮೂಲಕ ವಿದ್ಯುತ್ ಶುಲ್ಕ ಕಟ್ಟದೆ ಚಳವಳಿ ಮಾಡಲಾಗಿತ್ತು. ಈ ಸರ್ಕಾರ ಹಳೆ ಬಾಕಿ ಪಾವತಿಸಲು ನೋಟೀಸ್ ಕೊಡ್ತಾ ಇದೆ. ಮುಖ್ಯಮಂತ್ರಿ ಅವರು ಈ ಬಗ್ಗೆ ಯಾವುದೇ ರೀತಿಯ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾಳೆ ಅಂದರೆ  ಜೂನ್ 24 ರಂದು ಬೆಳಿಗ್ಗೆ 11 ಗಂಟೆಗೆ ಅಗ್ನಿಪಥ್ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವಂತೆ ಜಿಲ್ಲಾ ಕೇಂದ್ರದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುತ್ತದೆ.  ಜುಲೈ 11 ರಂದು ರೈತ ಸಂಘ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರ ಮನೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆ.  ಇದಕ್ಕೆ ಸಂಬಂಧಿಸಿದಂತೆ   ಜುಲೈ 02 ರಂದು ದಾವಣಗೆರೆ ಜಿಲ್ಲೆಯಲ್ಲಿ ರಾಜ್ಯ ಕಾರ್ಯಕಾರಣಿ ಪೂರ್ವಭಾವಿ ಸಭೆ ನಡೆಯಲಿದೆ ಎಂದರು.

ಜುಲೈ 01 ರಂದು ಮೈಸೂರು ನಗರದಲ್ಲಿ ದಕ್ಷಿಣ ಪದವೀಧರ ಚುನಾವಣೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗುತ್ತದೆ. ಇಲ್ಲಿ ಒಂದು ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಜುಲೈ 21 ಕ್ಕೆ ನರಗುಂದ ನವಲಗುಂದ ದಲ್ಲಿ ಹುತಾತ್ಮ ರೈತ ದಿನಾಚರಣೆ ಅಂಗವಾಗಿ ನರಗುಂದದಲ್ಲಿ ಬೃಹತ್ ಸಮಾವೇಶವನ್ನು ರೈತ ಸಂಘ ಹಮ್ಮಿಕೊಳ್ಳುತ್ತದೆ ಎಂದರು.

ನಕಲಿ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ‌ ವ್ಯಾಪಕವಾಗಿದೆ.ಕೃಷಿ ಮಂತ್ರಿ ಪ್ರತಿನಿಧಿಸುವ ಹಾವೇರಿಯಲ್ಲಿ  ಹೆಚ್ಚು ಕಂಡುಬರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇದೇ ತಿಂಗಳ 25 ರಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಲಿದ್ದೇವೆ ಎಂದು ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಅಶ್ವತ್ಥ್  ನಾರಾಯಣ ಅರಸ್, ಪ್ರಸನ್ನ ಎನ್ ಗೌಡ, ಹೊಸೂರು ಕುಮಾರ್, ಮರಂಕಯ್ಯ, ಮಂಡಕಳ್ಳಿ ಮಹೇಶ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: