ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಸೆಪ್ಟೆಂಬರ್ 2ಕ್ಕೆ ಚಿರುವಿನ ರಾಜಮಾರ್ತಾಂಡ ಬೆಳ್ಳಿಪರದೆಯ ಮೇಲೆ

ರಾಜ್ಯ(ಬೆಂಗಳೂರು),ಜೂ.23 : ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಕಡೆಯದಾಗಿ ನಟಿಸಿರುವ ಸಿನಿಮಾ `ರಾಜಮಾರ್ತಾಂಡ’ ತೆರೆಗೆ ಬರಲು ಸಜ್ಜಾಗಿದ್ದು, ಚಿರು ನೆನಪಿನಲ್ಲಿರುವ ಅಭಿಮಾನಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ನೀಡಿದೆ. ಈ ವರ್ಷದ ಅಂತ್ಯದೊಳಗೆ ಚಿರು ಸಿನಿಮಾ ಬೆಳ್ಳಿಪರದೆಯಲ್ಲಿ ಮಿಂಚಲು ಸಜ್ಜಾಗಿದೆ.

ಚಂದನವನದ ಪ್ರತಿಭಾವಂತ ನಟ ಚಿರು ಸರ್ಜಾ ಅಗಲಿ ಎರಡು ವರ್ಷಗಳು ಕಳೆದಿದೆ. ಇದೀಗ ಚಿರು ಅವರನ್ನ ರಾಯನ್ ಸರ್ಜಾ ಮೂಲಕ ನೋಡಿ ಖುಷಿಪಡ್ತಿದ್ದಾರೆ. ಚಿರು ಅಗಲಿಕೆಗೂ ಮುನ್ನ ಕೊನೆದಾಗಿ ನಟಿಸಿದ ಶಿವಕುಮಾರ್ ನಿರ್ಮಾಣದ `ರಾಜಮಾರ್ತಾಂಡ’ ಹಾಗಾಗಿ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಇದೇ ಸೆಪ್ಟೆಂಬರ್ 2ಕ್ಕೆ ಅದ್ದೂರಿಯಾಗಿ ತೆರೆಯ ಮೇಲೆ ಅಬ್ಬರಿಸಲು `ರಾಜಮಾರ್ತಾಂಡ’ ಸಜ್ಜಾಗಿದೆ. ರಿಲೀಸ್ ಕುರಿತು ನಟ ಧ್ರುವಾ ಸರ್ಜಾ ಟ್ವೀಟ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಕೆ.ರಾಮ್ ನಾರಾಯಣ್ ನಿರ್ದೇಶನದ `ರಾಜಮಾರ್ತಾಂಡ’ ಚಿತ್ರದ ಮೊದಲ ಟೀಸರ್ ಅನ್ನು ಚಿರು ಮಗ ರಾಯನ್ ರಿಲೀಸ್ ಮಾಡಿದ್ದರು. ಚಿತ್ರದಲ್ಲಿ ಚಿರಂಜೀವಿಗೆ ನಾಯಕಿಯರಾಗಿ ದೀಪ್ತಿ ಸಾತಿ, ಋಷಿಕಾ ರಾಜ್ ಕಾಣಿಸಿಕೊಂಡಿದ್ದಾರೆ. ಚಿರು ಪಾತ್ರಕ್ಕೆ ಧ್ರುವಾ ಸರ್ಜಾ ಧ್ವನಿ ನೀಡಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಚಿರು ಮಗ ರಾಯನ್ ಕೂಡ ನಟಿಸಿದ್ದಾರೆ.

ಈಗಾಗಲೇ ಚಿತ್ರದ ಲುಕ್, ಟೀಸರ್ ಮೂಲಕ ಮೋಡಿ ಮಾಡುತ್ತಿರುವ `ರಾಜಮಾರ್ತಾಂಡ’ ಇದೇ ಸೆಪ್ಟೆಂಬರ್ ೨ಕ್ಕೆ ಬೆಳ್ಳಿತೆರೆಯಲ್ಲಿ ಅಬ್ಬರಿಸಲು ರೆಡಿಯಾಗಿದೆ. ಇನ್ನು ಚಿರು ಕೊನೆಯ ಸಿನಿಮಾವಾಗಿರುವ ಕಾರಣ ಚಿತ್ರದ ಮೇಲೆ ಅಭಿಮಾನಿಗಳಿಗೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆಯಿದೆ.(ಎಸ್.ಎಂ)

Leave a Reply

comments

Related Articles

error: