ಕರ್ನಾಟಕಪ್ರಮುಖ ಸುದ್ದಿ
ಜೂ.27ರೊಳಗಾಗಿ ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕಬೇಕು ಇಲ್ಲದಿದ್ದರೆ ಒಂದು ಕನ್ನಡ ಬೋರ್ಡ್ ಇರಲು ಬಿಡುವುದಿಲ್ಲ ಎಂದು ಪೋಸ್ಟ್ ಹಾಕಿದ್ದ ಎಂಇಎಸ್ ಪುಂಡನ ಬಂಧನ
ರಾಜ್ಯ(ಬೆಳಗಾವಿ),ಜೂ.23 : ಜೂ.27ರೊಳಗಾಗಿ ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕಬೇಕು. ಇಲ್ಲದಿದ್ದರೆ ಒಂದೇ ಒಂದು ಕನ್ನಡ ಬೋರ್ಡ್ ಇರಲು ಬಿಡುವುದಿಲ್ಲ ಎಂದು ಪೋಸ್ಟ್ ಹಾಕಿದ್ದ ಎಂಇಎಸ್ ಪುಂಡನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಪದೇ ಪದೇ ಗಡಿ–ಭಾಷಾ ವಿಚಾರ ಇಟ್ಟುಕೊಂಡು ಕನ್ನಡಿಗರು ಮತ್ತು ಮರಾಠಿಗರ ಭಾವನೆಗೆ ದಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಎಂಇಎಸ್ ಪುಂಡರು ಸಾಮಾಜಿಕ ಜಾಲತಾಣದಲ್ಲಿ ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕಬೇಕು. ಇಲ್ಲದಿದ್ದರೆ ಒಂದೇ ಒಂದು ಕನ್ನಡ ಬೋರ್ಡ್ ಇರಲು ಬಿಡುವುದಿಲ್ಲ ಇದು ನಮ್ಮ ಮನವಿ ಅಲ್ಲ ಎಚ್ಚರಿಕೆ ಎಂದು ಪೋಸ್ಟ್ ಮಾಡಿದ್ದ.
ಈ ಕುರಿತು ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಿಸಿಕೊಂಡ ಪೊಲೀಸರು ರಾಯಲ್ ಬೆಳಗಾವಕರ್ ಎಂಬ ಹೆಸರಿನ ಖಾತೆದಾರನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಇನ್ಸ್ಟಾಗ್ರಾಂನಲ್ಲಿ ಕನ್ನಡಿಗರಿಗೆ, ಕರ್ನಾಟಕ ಸರ್ಕಾರಕ್ಕೆ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಸ್ವಯಂ ಪೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ.(ಎಸ್.ಎಂ)